ಧಾರವಾಡ –
ಬಸ್ ಬೈಕ್ ಅಪಘಾತ ವಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವಿಗೀಡಾಗಿದ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣ ದ ಮುಂದೆ ನಡೆದಿದೆ.

ಅಥಣಿ ಯಿಂದ ಧರ್ಮಸ್ಥಳ ಕಡೆಗೆ ಬಸ್ ಹೊರ ಟಿತ್ತು.ಇನ್ನೂ ಧಾರವಾಡ ದಿಂದ ಚಿಕ್ಕ ಮಲ್ಲಿಗವಾಡ ಕಡೆಗೆ ಹೊರಟಿದ್ದ ಯಲ್ಲಪ್ಪ ಮಹಾದೇವಪ್ಪ ಶಿಬಾರಗಟ್ಟಿ ಮೃತರಾದ ದುರ್ದೈವಿಗಳಾಗಿದ್ದಾರೆ

ಬಸ್ ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಕಾರಣವಾಗಿದ್ದು ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಲಗೌಡ ನಾಯ್ಕರ್ ,ಎಎಸ್ ಐ ಸಿಬ್ಬಂದಿ ಗಳಾದ ಶಿಂಧೆ,ನಮಾಜಿ,ಇನ್ನೂ ಸಿಬ್ಬಂದಿ ಗಳಾದ ರವಿರಾಜ ಪಾಟೀಲ, ಈರಣ್ಣ ಲಕ್ಕಮ್ಮನವರ, ಹಬೀಬ್, ಸೇರಿದಂತೆ ಹಲವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

ಮೃತ ಬೈಕ್ ಸವಾರನು ಚಿಕ್ಕಮಲ್ಲಿಗವಾಡ ಗ್ರಾಮದ ವನಾಗಿದ್ದಾನೆ