ಹುಬ್ಬಳ್ಳಿ –
ಸದಾ ಯಾವಾಗಲೂ ಸಾಮಾನ್ಯರಂತೆ ಇರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಾವು ಸಾಮಾನ್ಯರು ಎಂಬೊದ ನ್ನು ಮತ್ತೊಮ್ಮೆ ಇಂದು ಹುಬ್ಬಳ್ಳಿಯಲ್ಲಿ ತೋರಿಸಿಕೊಟ್ಟರು ಹೌದು ಯಾವಾಗಲೂ ಸಿಂಪಲ್ ಆಗಿರುವ ಇವರು ಇಂದು ಮತ್ತೊಮ್ಮೆ ಪತ್ನಿಯೊಂದಿಗೆ ಗುರುದತ್ತ ಭವನಕ್ಕೆ ಆಗಮಿಸಿ ತಿಂಡಿ ಸವಿದು ಸಾಮಾನ್ಯರು ಎಂಬೊದನ್ನುಈ ಮೂಲಕ ತೋರಿಸಿಕೊಟ್ಟರು.

ದೆಹಲಿಯಿಂದ ನಗರಕ್ಕೆ ಆಗಮಿಸಿದ ಇವರು ಪತ್ನಿಯೊಂ ದಿಗೆ ವಿಮಾನ ನಿಲ್ದಾಣಕ್ಕೆ ಆಗಮಸಿ ಹೊಟೇಲ್ ನಲ್ಲಿ ಎಲ್ಲರೊಂದಿಗೆ ಕುಳಿತುಕೊಂಡು ತಿಂಡಿ ಸವಿದರು. ನಗರ ದಲ್ಲಿ ಗುರುದತ್ತ ಭವನ ಉಪಹಾರಕ್ಕೆ ವಿಶೇಷವಾಗಿದ್ದು ಹೀಗಾಗಿ ದೆಹಲಿಯಿಂದ ನಗರಕ್ಕೆ ಆಗಮಿಸಿದ ಇವರು ಸಾಕಷ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಹಿನ್ನಲೆಯಲ್ಲಿ ನೇರವಾಗಿ ಹೊಟೇಲ್ ಗೆ ಆಗಮಿಸಿ ಪತ್ನಿಯೊಂದಿಗೆ ಕುಳಿತುಕೊಂಡು ಪುರಿ ಟೋಸ್ಟ್ ಸೇರಿದಂತೆ ಹಲವು ತಿಂಡಿಗಳ ಸವಿರುಚಿಯನ್ನು ಸವಿದರು.


ಇದರ ಮಧ್ಯೆ ಸಾರ್ವಜನಿಕರು ಬಂದ ಮಾತನಾಡಿಸಿದರು ಅವರೊಂದಿಗೆ ಮಾತನಾಡಿ ಕುಶಲೋಪರಿಯನ್ನು ವಿಚಾರಣೆ ಮಾಡಿದರು.ಆಪ್ತರು ಗೆಳೆಯರು ಕೇಂದ್ರ ಸಚಿವರಿಗೆ ಸಾಥ್ ನೀಡಿದರು.ಸಾರ್ವಜನಿಕರೊಂದಿಗೆ ಮಾತನಾಡಿ ಕುಶಲೋಪರಿ ವಿಚಾರ ಮಾಡಿದ ಸಚಿವರು ಸೆಲ್ಪಿ ತಗೆದುಕೊಳ್ಳಲು ಮುಗಿಬಿದ್ದಿರುವ ಚಿತ್ರಣವು ಕಂಡು ಬಂದಿತು.
ಉಪಹಾರ ಸವಿದ ನಂತರ ಕಾರ್ಯಕ್ರಮಗಳಲ್ಲಿ ಪಾಲ್ಗೊ ಳ್ಳಲು ಪ್ರಹ್ಲಾದ್ ಜೋಶಿ ಅವರು ತೆರಳಿದರು.ಒಟ್ಟಾರೆ ಕೇಂದ್ರ ಸಚಿವರಾದರು ಕೂಡಾ ತಾವೊಬ್ಬರು ಸಿಂಪಲ್ ಎಂಬೊದನ್ನು ಈ ಮೂಲಕ ಮತ್ತೊಮ್ಮೆ ಸಾಬೀತು ಮಾಡಿ ಹೊಟೇಲ್ ನಲ್ಲಿದ್ದ ಸಾರ್ವಜನಿಕರ ಗಮನ ಸೆಳೆದರು.