ಬೆಂಗಳೂರು –
ಒಂದು ಕಡೆಗೆ ಕರೋನಾ ಮತ್ತೊಂದು ಕಡೆಗೆ ಹಿಜಾಬ್ ಇವೆರಡರ ನಡುವೆ ಈಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳು ನಡೆದಿದ್ದು ರಾಜ್ಯಾದ್ಯಂತ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೂ ಪರೀಕ್ಷೆಗಳನ್ನು ಮಾಡಲಾಗಿದೆ. ಹಿಜಾಬ್ ಗೊಂದಲದ ನಡುವೆಯೇ ಎದುರಿಸಿದ್ದ ಮೊದ ಲನೇ ಪರೀಕ್ಷೆ ಕೂಡ ಇದಾಗಿತ್ತು.ಮೇ 2ನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬರಲಿದೆ.ಆದ್ರೆ ಇದೇಲ್ಲದರ ನಡುವೆಯೇ ಈಗ ಮೌಲ್ಯಮಾಪನ ಡ್ಯೂಟಿಗೆ ಹಾಜಾರಾಗದ ಶಿಕ್ಷಕರಿಗೆ ಶಿಸ್ತು ಕ್ರಮಕ್ಕೆ ಇಲಾಖೆಯ ಆಯು ಕ್ತರು ಖಡಕ್ ಸೂಚನೆಯನ್ನು ನೀಡಿದ್ದಾರೆ.
ಹೌದು ಒಟ್ಟು ರಾಜ್ಯಾದ್ಯಂತ ಮೌಲ್ಯಮಾಪನಕ್ಕೆ 73 ಸಾವಿರ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಕ ಮಾಡಿತ್ತು. ಆದ್ರೆ ಇದರಲ್ಲಿ 64 ಸಾವಿರ ಶಿಕ್ಷಕರು ಮಾತ್ರ ಹಾಜರಾಗಿದ್ದು ಬರೋಬ್ಬರಿ 9 ಸಾವಿರ ಶಿಕ್ಷಕರು ಈ ಒಂದು ಮೌಲ್ಯಮಾ ಪನ ಕಾರ್ಯಕ್ಕೆ ಗೈರಾಗಿದ್ದಾರೆ ಹೀಗಾಗಿ ಈ ಒಂದು ವಿಚಾರ ವನ್ನು ಶಿಕ್ಷಣ ಸಚಿವರು ಇಲಾಖೆಯ ಆಯುಕ್ತರು ಗಂಭೀರ ವಾಗಿ ತಗೆದುಕೊಂಡಿದ್ದು ಈ ಕುರಿತು ನಿಯಮದ ಪ್ರಕಾರ ಶಿಕ್ಷಣ ಇಲಾಖೆಯಲ್ಲಿ ಗೈರಾದ ಶಿಕ್ಷಕರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದು ಕ್ರಮ ಕೈಗೊಂಡ ಕುರಿತಂತೆ ವರದಿಯನ್ನು ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ.