ಹುಬ್ಬಳ್ಳಿ –
ಕಚೇರಿಯಲ್ಲಿ ಕಡತಗಳನ್ನು ಬಾಕಿ ಇಟ್ಟುಕೊಂಡಿರುವ ಆರೋಪ ಕುರಿತಂತೆ ಹುಬ್ಬಳ್ಳಿ ಧಾರವಾಡ ನಗರಾಭಿೃದ್ದಿ ಪ್ರಾಧಿಕಾರದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಹೌದು ನವನಗರದಲ್ಲಿರು ಕಚೇರಿ ಮೇಲೆ ಎರಡು ಟೀಮ್ ನಲ್ಲಿ ಅಧಿಕಾರಿಗಳು ದಾಳಿ ಮಾಡಿ ಕಚೇರಿ ಯಲ್ಲಿ ಪರಿಶೀಲನೆ ಮಾಡ್ತಾ ಇದ್ದಾರೆ.ಗದಗ ನಿಂದ ಒಂದು ಅಧಿಕಾರಿಗಳ ಟೀಮ್ ಮತ್ತು ಇತ್ತ ಧಾರವಾಡದಿಂದ ಮತ್ತೊಂದು ಅಧಿಕಾರಿಗಳ ಟೀಮ್ ನಲ್ಲಿ ಈ ಒಂದು ದಾಳಿಯಾಗಿದ್ದು ಕಚೇರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರ ಪೈಲ್ ಗಳನ್ನು ವಿನಾಕಾರಣ ಇಟ್ಟುಕೊಂಡಿ ದ್ದಾರೆ ಎಂಬ ವಿಚಾರ ಕುರಿತಂತೆ ಸಾಕಷ್ಟು ದೂರುಗಳು ಬಂದಿದ್ದವು
ಹೀಗಾಗಿ ದೂರುಗಳ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇದನ್ನು ಗಂಭಿರವಾಗಿ ಪರಿಗಣಿಸಿದ್ದು ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ಅವರ ನೇತ್ರತ್ವದಲ್ಲಿ ಈ ಒಂದು ದಾಳಿಯಾ ಗಿದ್ದು ಸಧ್ಯ ದಾಳಿಯನ್ನು ಮಾಡಿರುವ ಎಸಿಬಿ ಅಧಿಕಾರಿಗ ಳು ಮತ್ತು ಟೀಮ್ ದಾಖಲೆಗಳನ್ನು ಪರಿಶೀಲನೆ ಮಾಡತಾ ಇದ್ದಾರೆ.