This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಹೆಸರಾಂತ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಹತ್ಯೆಯ ಕಂಪ್ಲೀಟ್ ಕಹಾನಿ – ಹತ್ಯೆ ಸ್ಕೇಚ್ ನಿಂದ ಆರೋಪಿಗಳ ಬಂಧನ ವರೆಗಿನ ಸಂಪೂರ್ಣ ಮಾಹಿತಿ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಅವರು ಇಡೀ ರಾಜ್ಯಕ್ಕೆ ಹೆಸರಾಂತ ಜ್ಯೋತಿಷಿ.ಅವರ ಬಳಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ತಮ್ಮ ಕಷ್ಟ ನಿವಾ ರಣೆ ಮಾಡುವಂತೆ ಕೇಳಿಕೊಳ್ಳುತ್ತಾರೆ.ಆದರೆ ಇಂದು ಅದೇ ಭಕ್ತರ ಸೋಗಿನಲ್ಲಿ ಬಂದ ಹಂತಕರು ಗುರೂಜಿಯ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ.ಅಲ್ಲಿದ್ದವರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.ಹಾಗಾದ್ರೆ ಹೇಗಿತ್ತು ಆ ಭೀಕರ ಕೊಲೆ ಅಂತೀರಾ ಈ ಸ್ಟೋರಿ ನೋಡಿ.

ಹೌದು ನೋಡ ನೋಡುತ್ತಿದ್ದಂತೆ ಗೂರೂಜಿಗಳ ಹತ್ಯೆ ನಡೆದೇ ಹೋಯಿತು ಕೊಲೆಯನ್ನು ನೋಡಿದ ಜನರು ಭಯದಿಂದ ಚೀರುತ್ತಾ ಓಡಿ ಹೋಗಿದ್ದಾರೆ ಅಷ್ಟೇ ಭೀಕರ ತೆಯಿಂದ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಇಬ್ಬರು ಹತ್ಯೆ ನಡೆದೇ ಹೋಯಿತು.ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಪ್ರಸಿಡೆಂಟ್ ಹೋಟಲ್ ನಲ್ಲಿ ಗುರೂಜಿಗಳ ಹತ್ಯೆ ನಡೆದೆ ಹೋಗಿತ್ತು

ಬೆಳಗ್ಗೆ 12-30 ರ ಸುಮಾರಿಗೆ ಇಬ್ಬರು ಹಂತಕರು ಭಕ್ತರ ಸೋಗಿನಲ್ಲಿ ಬಂದು ಹಂತಕರು.ಅದರಲ್ಲಿ ಒಬ್ಬ ಹಂತಕ ಚಂದ್ರಶೇಖರ್ ಗುರೂಜಿಗಳ ಕಾಲಿಗೆ ನಮಸ್ಕರಿಸಿದ್ದಾನೆ ಅದೇ ಸಮಯ ಕಾಯುತ್ತಿದ್ದ ಮತ್ತೊಬ್ಬ ಹಂತಕ ಚಾಕುವಿ ನಿಂದ ಚಂದ್ರಶೇಖರ್ ಗುರೂಜಿಗಳ ಎದೆಯ ಭಾಗಕ್ಕೆ ಚುಚ್ವಿದ್ದಾನೆ.‌

ನಂತರ ಇಬ್ಬರು ಹಂತಕರು ಸೇರಿ ಕೆಲವೇ ಕ್ಷಣದಲ್ಲಿ 60ಕ್ಕೂ ಹೆಚ್ವು ಕಡೆ ಚುಚ್ವಿ ಇಬ್ಬರು ಹಂತಕರು ಪರಾರಿಯಾಗಿದ್ದಾರೆ. ಹಂತಕರು ಮಾಡಿದ ಕೃತ್ಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾ ಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದು ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.ಗುರೂಜಿ ಹತ್ಯೆಯ ಆರೋಪಿ ಮಹಾಂತೇಶ್ ಶಿರೂರ್ ಎಂಬುವಂತ ಮಾಹಿತಿ ಲಭ್ಯವಾ ಗುತ್ತಿದ್ದಂತೆ ಸಿಸಿಟಿವಿ ದೃಶ್ಯದಲ್ಲಿ ಗುರೂಜಿಯ ಆಪ್ತ ಮಹಾಂತೇಶ ಶಿರೂರ್ ಕಾಣಿಸಿಕೊಂಡಿದ್ದು ಮೊದಲು ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದ ಪೊಲೀಸರು ಮಾಹಿತಿ ಕಲೆ ಹಾಕಿ ಇಬ್ಬರು ಹಂತಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

https://youtu.be/2W_D4EZOMlw

ಚಂದ್ರಶೇಖರ ಗುರೂಜಿ ಅವರ ಹತ್ಯೆ ಪ್ರಕರಣದ ತನಿಖೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭುರಾಮ್ ಹಾಗೂ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಐದು ವಿಶೇಷ ತಂಡ ರಚಿಸಿದ್ದರು.ಈಗಾಗಲೇ ಕೊಲೆಯ ಪ್ರಮುಖ ಆರೋಪಿಗಳಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.ಇನ್ನೂ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ವಿಶೇಷ ತಂಡಗಳ ಮೂಲಕ ನಗರದ ರೈಲು ನಿಲ್ದಾಣ ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಬೆಳಗಾವಿ ರಾಮದುರ್ಗದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಗುರೂಜಿ ಶವ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ‌.ಮೂಲತಃ ಬಾಗಲಕೋಟೆ ಯವರಾದ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿ ವಿದ್ಯಾನ ಗದಲ್ಲಿ ವಾಸವಾಗಿದ್ದರು.ವಾಸ್ತು ಕುರಿತು ಸಲಹೆ,ಸೂಚನೆ ನೀಡಲು ಜುಲೈ 3ರಂದು ಪ್ರೆಸಿಡೆಂಟ್ ಹೋಟೆಲ್’ನ ಕೊಠಡಿ ನಂ.220 ರಲ್ಲಿ ವಾಸವಾಗಿದ್ದರು.ಬುಧವಾರ ಕೊಠಡಿ ತೆರವುಗೊಳಿಸುವುದಾಗಿ ಹೇಳಿದ್ದರು.ಹೋಟೆಲ್’ಗೆ ಬಂದಿದ್ದ ದುಷ್ಕರ್ಮಿಗಳು ಗುರೂಜಿಗೆ ದೂರವಾಣಿ ಕರೆ ಮಾಡಿ,ಸ್ವಾಗತಕಾರರ ಕೌಂಟರ್’ನಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದರು.

ಸ್ವಾಗತಕಾರರ ಕೌಂಟರ್ ಗೆ ಬಂದ ಗುರೂಜಿ, ದುಷ್ಕರ್ಮಿ ಗಳ ಬಳಿ ಕೂತು ಕುಷಲೋಪರಿ ವಿಚಾರಿಸಿದ್ದಾರೆ.ಅವರಲ್ಲಿ ಒಬ್ಬ ಗುರೂಜಿ ಕಾಲಿಗೆ ನಮಸ್ಕರಿಸಿದ ಹಾಗೆ ಮಾಡಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ.

ಹತ್ಯೆ ಕೃತ್ಯ ನಡೆಯುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇನ್ನೂ ಈ ಒಂದು ವಿಚಾರ ಕುರಿತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಹೇಳಿದ್ದು ಹೀಗೆ

ಇನ್ನು ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದ ಹಂತಕರನ್ನು ಕರೆತಂದು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.ಹತ್ಯೆಯ ಹಿಂದಿನ ನಿಜವಾದ ರಹಸ್ಯ ಹೊರತೆಗೆಯಲು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ..


Google News

 

 

WhatsApp Group Join Now
Telegram Group Join Now
Suddi Sante Desk