ಕಲಘಟಗಿ –
ಅದ್ಯಾಕೋ ಏನೋ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಗೂ ವಿವಾದಗಳಿಗೂ ಅವಿನಾಭಾವ ಸಂಭಂಧ ಇದೆ ಎಂಬಂತೆ ಕಾಣುತ್ತಿದೆ.ಸದಾ ಒಂದಲ್ಲ ಒಂದು ವಿವಾ ದಗಳು ಇವರ ವಿರುದ್ದ ಕೇಳಿ ಬರುತ್ತಿವೆ.ಅದರಲ್ಲೂ ನವನಗರ ಪೊಲೀಸ್ ಠಾಣೆಯಿಂದ ಆರಂಭಗೊಂಡ ಕಿರಿಕಿರಿಯ ವಿಚಾರಗಳು ನಗರದ ಪೊಲೀಸ್ ಇಲಾ ಖೆಯಿಂದ ಜಿಲ್ಲಾ ಪೊಲೀಸ್ ಇಲಾಖೆಗೂ ಹೊದರು ಬಿಡುವಂತೆ ಕಾಣುತ್ತಿಲ್ಲ.ಹೌದು ಇದಕ್ಕೆ ಕಲಘಟಗಿ ಯಲ್ಲಿ ಮೇಲಿಂದ ಮೇಲೆ ಕಂಡು ಬರುತ್ತಿರುವ ಒಂದ ಲ್ಲ ಒಂದು ಘಟನೆಗಳೇ ಸಾಕ್ಷಿಯಾಗಿದ್ದು ಈಗ ಇವರ ವಿರುದ್ದ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ ಸಿದ್ದವಾಗುತ್ತಿದೆ.

ಹೌದು ನಾನು 35 ವರ್ಷಗಳಿಂದ ನೊಂದವರಿಗೆ ಶೋಷಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ದ್ದೇನೆ.ಆದರೆ ಸಿಪಿಐ ಪ್ರಭು ಸೂರಿನ ಆಡಿಯೋ ವೈರಲ್ ಮಾಡಿ ಹೋರಾಟ ಹತ್ತಿಕ್ಕಿ ನಮ್ಮನ್ನು ತೇಜೋವದೆ ಮಾಡುತ್ತಿದ್ದಾರೆ ಎಂದು ದಲಿತ ಸಂಘ ರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಲಕ್ಷ್ಮಣ ಬ ದೊಡಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕಲಘಟಗಿ ಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ತಪ್ಪು ಮಾಡದ ಮೂರನೇ ದಲಿತ ವ್ಯಕ್ತಿ ಡೇವಿಡ್ ದೂಪದ ಮೇಲೆ ಚಿತ್ರ ಹಿಂಸೆ ಮಾಡಿ ಹಲ್ಲೆ ಮಾಡಿ ಕಾನೂನು ರಕ್ಷಿಸುವವರೇ ಉಲ್ಲಂಘನೆ ಮಾಡಿರುವದು ಯಾವ ನ್ಯಾಯ ಎಂದರು.ಈ ಘಟ ನೆ ಕುರಿತು ನಾನು ಜಿಲ್ಲಾ ಪೊಲೀಸ್ ಎಸ್ಪಿ ಯವರಿಗೆ ಎರಡು ಬಾರಿ ದೂರು ಕೊಟ್ಟಿದ್ದು ಏನು ಈ ವರೆಗೆ ಇವರ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಡಿಜಿಪಿ ಯವರಿಗೆ ಗೃಹ ಸಚಿವರಿಗೆ ದೂರು ನೀಡುತ್ತೇ ನೆ ಎಂದರು.

ದಲಿತ ಸಂಘರ್ಷ ಸಮಿತಿ ವಿಭಾಗಿ ಮುಖಂಡ ಲಕ್ಷ್ಮಣ.ಈ ದೊಡ್ಡಮನಿ ಮಾತನಾಡಿ ಅರಣ್ಯ ಪ್ರದೇಶದಲ್ಲಿ ಯಾರೋ ದುಷ್ಕರ್ಮಿಗಳು ಪ್ರಾಣಿ ಬೇಟಿಯಾಡಲು ಹೋದಾಗ ಮಾಹಿತಿ ನೀಡಿದವ ರನ್ನೇ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಸಿಪಿಐ ಸೂರಿನ ಅವರು ಅಮಾನುಷವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿದರು.ಸಂವಿಧಾನದ ಕಾನೂನು ನಿಯ ಮ ಹೊರತುಪಡಿಸಿ ಕುಡಿಹಾಕಿ ಉದ್ದೇಶ ಪೂರ್ವಕ ವಾಗಿ ಹಲ್ಲೆ ಮಾಡಿದ್ದಾರೆ ಎಂದು ನಮಗೆ ದೂರು ನೀಡಿದ್ದರು.ಅದಕ್ಕೆ ನಾವು ಜಿಲ್ಲಾ ಮಟ್ಟದಲ್ಲಿ ಚಳುವ ಳಿ ಮಾಡಿ ಅಮಾನುಷವಾಗಿ ಹಲ್ಲೆ ಮಾಡಿದ್ದ ದಲಿತ ವ್ಯಕ್ತಿಗೆ ನ್ಯಾಯ ದೊರಕಿಸಿ ಸಿಪಿಐ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಸಲ್ಲಿಸಿದ್ದು ಇರುತ್ತದೆ ಎಂದರು.ಸಿಪಿಐ ಸೂರಿನ ಅವರು ಸರ್ವಾಧಿಕಾರಿ ಧೋರಣೆಯಿಂದ ಹೋರಾಟಗಾರರ ಚಳುವಳಿ ಹತ್ತಿಕ್ಕುವ ನಿಟ್ಟಿನಲ್ಲಿ ದೂರವಾಣಿ ಕರೆಯಲ್ಲಿ ಮಾತ ನಾಡಿದ ಆಡಿಯೋ ವೈರಲ್ ಮಾಡಿ ತೇಜೋವದೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅಲ್ಲದೇ ಅವರ ಮೇಲೆ ಸೂಕ್ತ ಕ್ರಮವನ್ನು ತಗೆದುಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಒಂದು ವಾರದ ಗಡುವನ್ನು ನೀಡುತ್ತೆವೆ ತಗೆದುಕೊಳ್ಳದಿದ್ದರೆ ಕಲಘಟಗಿ ಯಿಂದ ಧಾರವಾಡದ ವರೆಗೆ ದೊಡ್ಡ ಪ್ರಮಾಣದಲ್ಲಿ ಹೋ ರಾಟವನ್ನು ಮಾಡಲಾಗುತ್ತದೆ ಅಧಿಕಾರಿಯಯನ್ನು ಅಮಾನತು ಮಾಡುವವರೆ ನಮ್ಮ ಹೋರಾಟ ನಿಲ್ಲೊದಿಲ್ಲ ಎಂದು ಹೇಳಿದರು
ಇನ್ನೂ ಈ ಒಂದು ಪತ್ರಿಕಾಗೊಷ್ಠಿಯಲ್ಲಿ ಸಂಘಟನೆ ಯ ಮುಖಂಡರಾದ ಲಿಂಗರಾಜ ಅಂದರಕಂಡಿ, ಸುಧೀರ್ ಮುಧೋಳ, ಮಾರುತಿ ಲಮಾಣಿ ಸೇರಿ ದಂತೆ ಹಲವರು ಉಪಸ್ಥಿತರಿದ್ದರು