ಹುಬ್ಬಳ್ಳಿ –
ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಮತ್ತು ತಗೆದುಕೊಳ್ಳುತ್ತಿದ್ದ ಖತರ್ನಾಕ್ ಕಳ್ಳರನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ನಗರದ ಹಲವೆಡೆ ರಸ್ತೆ ಅಕ್ಕಪಕ್ಕದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳನ್ನು ಕಳ್ಳತನ ಮಾಡಿ ಅವುಗಳನ್ನು ಮಾರಾಟ ಮಾಡುತ್ತಿದ್ದನು. ಹೀಗೆ ಕಳ್ಳತನ ಮಾಡಿ ಮಾರಾಟ ಮಾಡುವ ಸಮಯದಲ್ಲಿ ಕಳ್ಳನನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಪಡದಯ್ಯನ ಹಕ್ಕಲ ಬಡಾವಣೆಯ ನಿವಾಸಿ ನಾಗರಾಜ ಅಂಬಿಗೇರ ಬಂಧಿತ ಆರೋಪಿಯಾಗಿದ್ದಾನೆ.ಇನ್ನೂ ಇವನ ಹೇಳಿಕೆ ಆಧಾರದ ಮೇಲೆ ಬೈಕ್ ಗಳನ್ನು ಇವನು ತೆಗೆದುಕೊಂಡು ಬಂದ ಬೈಕ್ ಗಳನ್ನು ತಗೆದುಕೊಳ್ಳುತ್ತಿದ್ದ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಮೆಹಬೂಬ ಅತ್ತಾರ, ಮತ್ತು ರಸೂಲ ಕಿತ್ತೂರ ಇವರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಹಳೇ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ. ಬಂಧಿತರಿಂದ TVs ಏಕ್ಸ್ ಎಲ್ ,3 ಸ್ಪೆಂಡರ್ ಪ್ಲಸ್ ಸೇರಿದಂತೆ 28 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗರಾಜ ಗ್ಯಾರೇಜ್ ವೊಂದನ್ನು ಇಟ್ಟುಕೊಂಡಿದ್ದು ಅಲ್ಲಿಗೆ ಬರುವ ಸಾರ್ವಜನಿಕರನ್ನು ನಂಬಿಸಿ ಅವರಿಗೆ ಬೈಕ್ ಗಳನ್ನು ಮಾರಾಟ ಮಾಡುತ್ತಿದ್ದನು. ಹೀಗೆ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಮಾಹಿತಿ ಪಡೆದ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಕೊನೆಗೂ ಎಡೆ ಮೂರಿ ಕಟ್ಟಿದ್ದಾರೆ.
ನಾಗರಾಜನನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು ವಿಚಾರಣೆ ಮಾಡಿ ಕಳ್ಳತನ ಮಾಡಿ ಮಾರಾಟ ಮಾಡಿದ್ದ 25 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸಧ್ಯ ಬೇರೆ ಬೇರೆ ಕಂಪನಿಗಳ ಬೈಕ್ ಗಳನ್ನು ವಿದ್ಯಾನಗರ ಪೊಲೀಸರು ವಶಪಡಿಸಿಕೊಂಡು ಯಶಶ್ವಿ ಕಾರ್ಯಾಚರಣೆ ಮಾಡಿದ್ದಾರೆ.
ವಿದ್ಯಾನಗರ ಇನಸ್ಪೇಕ್ಟರ್ ಆನಂದ ವನಕುದರಿ ನೇತ್ರತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ. ಇನಸ್ಪೇಕ್ಟರ್ ರೊಂದಿಗೆ ಪಿಎಸೈ ಶಿವಾನಂದ ಬನ್ನಿಕೊಪ್ಪ ಠಾಣೆಯ ಸಿಬ್ಬಂದಿಗಳಾದ ಸುನೀಲ ಲವಾಣಿ,ರಮೇಶ ಹಲ್ಲೆ,ಶಂಕರ ಹೊಸಮನಿ, ಎಸ್ ಎಚ್ ತಹಶೀಲ್ದಾರ, ಬಿ ಎಚ್ ಹಡಪದ,ಮಂಜು ಏಣಗಿ, ಯಳವತ್ತಿ, ವಾಯ್ ಎಮ್ ಶಂಡ್ಗೆ ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ದೊಡ್ಡ ಪ್ರಮಾಣದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿದ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಗೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.