ಧಾರವಾಡ –
ತುಮಕೂರಿನ ಸರ್ಕಾರಿ ನೌಕರರ ಸಮಾರಂಭದಲ್ಲಿ ಶಿಕ್ಷಕಿಯರ ಜೊತೆ ಅಸಭ್ಯವಾಗಿ ವರ್ತಿಸಿ ಸಾರ್ವಜ ನಿಕವಾಗಿ ಅವಮಾನಿಸಿ,ಜೀವ ಬೆದರಿಕೆ ಹಾಕಿರುವ ಜಿಲ್ಲಾಧ್ಯಕ್ಷರ ದರ್ಪದ ನಡೆ ಸಹಿಸದು ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್.ಮುಳ್ಳೂರ,ಶ್ರೀಮತಿ ಜ್ಯೋತಿ.H. ರಾಜ್ಯ ಪ್ರಧಾನ ಕಾರ್ಯದರ್ಶಿರವರು ತೀವ್ರವಾಗಿ ಖಂಡಿಸಿದ್ದಾರೆ

ಅವರ ವಿರುದ್ದ ಪ್ರಕರಣ ದಾಖಲಾಗಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದ್ದಾರೆ ಮಹಿಳೆಯರಿಗೆ ಸಮಾನತೆಯಿಂದ ನೋಡುವ ಸಹನೀಯ ಸಮಾನ ಮನಸ್ಕರ ಸಂಖ್ಯೆ ಬಹಳ ಕಡಿಮೆ ಇದೆ ಇದಕ್ಕೆ ತುಮಕೂರಿನ ಈ ಘಟನೆಯೇ ಸಾಕ್ಷಿಯಾಗಿದೆ ಎಂದರು.

ನೌಕರರ ಸಂಘದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂಬಂದ ನ್ಯಾಯಸಮ್ಮತ ಮನವಿ ಸಲ್ಲಿಸಲು ಹೋದ ಶಿಕ್ಷಕಿಯರ ವಿರುದ್ದ ಒಬ್ಬ ಸರ್ಕಾರಿ ನೌಕರನಾದ ನರಸಿಂಹರಾಜು ಅಸಹನೆ ಅಧಿಕಾರದ ದರ್ಪದಿಂದ ಈ ರೀತಿ ಅನುಚಿತವಾಗಿ ವರ್ತಿಸಿ ಮಹಿಳೆಯರ ಮೇಲೆ ದಮ್ಕಿ ಹಾಕಿ ಬೆದರಿಕೆ ಹಾಕಿರುವುದು ನೌಕರರ ಸಂಘಕ್ಕೆ ಮಾಡಿದ ಅಪ ಮಾನವಾಗಿದೆ ಇದಕ್ಕೆ ಮಹಿಳೆಯರು ತಲೆ ಬಗ್ಗಿಸಿ ಕೊಂಡು, ಅವಮಾನ ಸಹಿಸಿಕೊಳ್ಳಲು ಬ್ರಿಟೀಷ್ ದಬ್ಬಾಳಿಕೆಯ ಆಡಳಿತದ ಕಾಲ ಇದಲ್ಲ ಪ್ರಜಾಪ್ರ ಭುತ್ವ ಸಂವಿಧಾನಿಕ ಸಮಾನತೆಯ ಕಾಲವಿದು ಎಂದು ಗುಡುಗಿದ್ದಾರೆ ಮಹಿಳೆಯರು ಹೆದರಿದಷ್ಟು ಹೆದರಿಸುವವರು ಜಾಸ್ತಿ ಹುಟ್ಟಿಕೊಳ್ಳುವರು ಯಾವ ಮಹಿಳೆಯರು ಇಂತಹ ದೌರ್ಜನ್ಯಗಳಿಗೆ ಹೆದರದೆ ಒಗ್ಗಟ್ಟಿನಿಂದ ಎದುರಿಸಬೇಕು ಹೆಣ್ಣನ್ನು ಯಾರು ಹೀನವಾಗಿ ನೋಡುತ್ತಾರೆ,ಅಸಬ್ಯವಾಗಿ ವರ್ತಿಸು ತ್ತಾರೆ ಬೆದರಿಕೆ ಹಾಕುತ್ತಾರೆ ಅಂತವರಿಗೆ ತಕ್ಕ ಪಾಠ ಕಲಿಸಲೇಬೇಕಾದ ಅನಿವಾರ್ಯತೆ ಇದೆ,ಅಂತವರಿಗೆ ಕಾನೂನು ರೀತಿ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ
