ಧಾರವಾಡ –
ಸಂಘಟನೆಗೆ ಸರ್ಕಾರದಿಂದ ನೊಂದಣಿ ಕಡ್ಡಾಯ ಹೊರತು ಸರ್ಕಾರದ ಮಾನ್ಯತೆ ಪ್ರಮುಖವಲ್ಲ ಸರ್ಕಾರದ ಮಾನ್ಯತೆ ಇಲ್ಲದ ಕಾರಣಕ್ಕೆ ಸಂಘಟನೆಗಳು ಅನಧಿಕೃತ ಎಂದು ಭಾವಿಸುವುದು ತಪ್ಪು.ಸಂಘಟನೆ ಎಂಬುದು ಯಾರೊಬ್ಬರ ಹಿಡಿತದಲ್ಲಿ ರಚಿಸಿಕೊಳ್ಳುವ ವ್ಯವಸ್ಥೆ ಅಲ್ಲ ಯಾರೊಬ್ಬ ವ್ಯಕ್ತಿಯ ಬೆಂಬಲದ ಅನುಮತಿಯ ಅವಶ್ಯಕ ತೆಯೂ ಇಲ್ಲ ತಮ್ಮ ಒಳಿತಿಗಾಗಿ,ರಕ್ಷಣೆಗಾಗಿ ಸಮಾನರು ಎಲ್ಲರೂ ಒಗ್ಗೂಡಿ ಒಗ್ಗಟ್ಟು ಮೂಡಿಸಿಕೊಳ್ಳುವ ಒಂದು ಸ್ವಯಂನಿರ್ಧಾರಿತ ಸಮೂಹದ ವ್ಯವಸ್ಥೆಯಾಗಿದೆ ಎಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ಹೇಳಿದರು ಪತ್ರಿಕಾ ಪ್ರಕಟಣೆ ಯ ಮೂಲಕ ಸಂಘಟನೆ ಕುರಿತು ಮಾತನಾಡುವವರಿಗೆ ದಾಖಲೆಗಳ ಮೂಲಕ ಉತ್ತರವನ್ನು ನೀಡಿದರು ರಾಜ್ಯಾದ್ಯಂತ ತೀವ್ರಗತಿಯಲ್ಲಿ ಬಲಾಡ್ಯವಾಗಿ ಸಮಸ್ತ ಶಿಕ್ಷಕಿಯರು ಒಂದಾಗಿ ಒಗ್ಗಟ್ಟಾಗಿ ಬೆಳೆಯಲು ಅವಕಾಶವನ್ನು ನೀಡಲಾಗಿದೆ ಎಂದರು

ಸಂಘ ವ್ಯವಸ್ಥೆಗೆ ಸಂವಿಧಾನ ಕಾನೂನಿನ ಅಡಿಯಲ್ಲಿಯೂ ಸಹ ಅವಕಾಶ ಕಲ್ಪಿಸಲಾಗಿದೆ.ಯಾವುದೇ ಸಂಘ ಸಂಸ್ಥೆ ಗಳು ಕರ್ನಾಟಕ ಸರ್ಕಾರ ಸಹಕಾರ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿರುತ್ತವೆ.ಅಂತ ನೊಂದಣಿಯಾದ ಸಂಘಗಳೆಲ್ಲವೂ ಅಧಿಕೃತ ಸಂಘಗಳಾಗಿರುತ್ತವೆ. ಇಲಾಖೆ ಯ ನೊಂದಣಿ ಪ್ರಮಾಣ ಪತ್ರವೇ ಸಂಘದ ಅಧಿಕೃತವಾದ ದಾಖಲೆಯಾಗಿರುತ್ತದೆ.ಸಂಘದ ಸದಸ್ಯರೆಲ್ಲರೂ ಉತ್ತಮ ನಾಯಕತ್ವದ ಅಡಿಯಲ್ಲಿ ಸಾಮೂಹಿಕ ಒಗ್ಗಟ್ಟು ಪ್ರದರ್ಶಿ ಸುವ ಜೊತೆಯಲ್ಲಿ ಪ್ರಾಮಾಣಿಕವಾಗಿ ನಿಸ್ವಾರ್ಥತೆ ಯಿಂದ ಸೇವಾಮನೋಭಾವದಿ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಅಂತಹ ಸಂಘ ಟನೆಗಳು ತಾನಾಗಿಯೇ ಬೆಳೆದು ನಿಲ್ಲುತ್ತವೆ.ಅಂತಹ ಸಂಘ ಟನೆಗಳು ಅಗತ್ಯವೆನಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾ ರದಿಂದ ವಿಶೇಷ ಸ್ಥಾನಮಾನ ಪಡೆಯಲು ಅಂದರೆ ಮಾನ್ಯತೆ ಪಡೆದುಕೊಳ್ಳಲು ಮುಂದಾಗಲೂಬಹುದು ಎಂದಿದ್ದಾರೆ

ಸಂಘದ ಬೆಳವಣಿಗೆ ಸಹಿಸದ ಕೆಲವರು ಅಧಿಕೃತ ಸಂಘ ರಚನೆಯ ನಿಯಮ ತಿಳಿಯದ ಅಥವಾ ಮಾನ್ಯತೆಗೂ ನೊಂದಣಿಗೂ ವ್ಯತ್ಯಾಸ ತಿಳಿಯದ ಕೆಲವರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಅನಧಿಕೃತ ಸಂಘ,ಮಾನ್ಯತೆ ಇಲ್ಲ ಎಂದು ವಾಟ್ಸಪ್ ಜಾಲತಾಣದಲ್ಲಿ ಪ್ರಚಾರ ಮಾಡಿ ತಮ್ಮತನವನ್ನು,ತಮ್ಮ ಗೌರವವನ್ನು,ತಮ್ಮ ಮರ್ಯಾದೆ ಯನ್ನು ತಾವೇ ಕಳೆದುಕೊಳ್ಳುತ್ತಿರುವ ಸಂದೇ ಶಗಳನ್ನು ನಾವಿಂದು ನೋಡುತ್ತಿದ್ದೇವೆ.ಹೀಗಾಗಿ ಇಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ರಾಜ್ಯಾದ್ಯಂತ ತೀವ್ರಗತಿಯಲ್ಲಿ ಬಲಾಡ್ಯವಾಗಿ ಸಮಸ್ತ ಶಿಕ್ಷಕಿಯರು ಒಂದಾಗಿ ಒಗ್ಗಟ್ಟಾಗಿ ರುವುದು ಅಂತಹ ಕಿಡಿ ಗೇಡಿಗಳನ್ನು ನಿದ್ದೆಗೆಡಿಸಿರಬಹುದು.ಮಹಿಳಾ ಶಿಕ್ಷಕಿಯರು ಗುರುತರ ಹುದ್ದೆಗಳಲ್ಲಿ ಗುರ್ತಿಸಿಕೊಂಡು ಇಂದು ಸರಿಸ ಮಾನ ವೇದಿಕೆ ಅಲಂಕರಿಸುತ್ತಿರುವುದು ಸಹಾ ಅಂತಹ ಕಿಡಿಗೇಡಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರಬ ಹುದು.ಮುಂದಿನ ದಿನಗಳಲ್ಲಿ ತಮ್ಮ ಸ್ಥಾನಗಳಿಗೆ ಚ್ಯುತಿ ಬರಬಹುದೆಂಬ ಭಯವೂ ಇರಬಹುದು.


ಒಂದು ಸಂಘದ ಪ್ರತಿನಿಧಿಯಾಗಲು ಆ ಸಂಘದ ಸದಸ್ಯ ಶಿಕ್ಷಕಿಯರ ಮತಗಳ ಬಿಕ್ಷೆಯೇ ಕಾರಣ ಎಂಬುದನ್ನ ಮರೆತು ಶಿಕ್ಷಕಿಯರ ಬಗ್ಗೆ ಅಗೌರವದ,ಅಹಂಕಾರದ ಮಾತುಗಳಾಡುವವರು ಮತ್ತೆ ಮತಬಿಕ್ಷೆ ಕೇಳಲು ಶಿಕ್ಷಕಿ ಯರ ಬಳಿ ಬರಲೇಬೇಕೆಂಬ ಕಿಂಚಿತ್ತು ಯೋಚನೆ ಮಾಡದೆ ಇಂತಹ ಹೇಳಿಕೆ ನೀಡುತ್ತಿರುವುದು ಅವರೇ ಅವರ ಅವನ ತಿಗೆ ಬಾವಿ ತೋಡಿಕೊಂಡಂತಿದೆ.ಅಲ್ಪಾವಧಿ ಅಧಿಕಾರದ ಬೆದರಿಕೆ ಮಾತುಗಳು ಸಂಪೂರ್ಣ ಸೇವಾವಧಿಯಲ್ಲಿ ಮತಬಿಕ್ಷೆ ಹಾಕುವ ಶಿಕ್ಷಕಿಯರಿಗೆ ಎಂದಿಗೂ ಅವಶ್ಯಕವಿಲ್ಲ. ಸದಸ್ಯರುಗಳಿಂದ ಸಂಘಟನೆ ಹೊರತು,ಸಂಘದಿಂದ ಸದಸ್ಯರುಗಳಲ್ಲ ಎಂಬುದನ್ನು ಅವರು ಮರೆತಂತಿದೆ. ಸ್ವಾಭಿಮಾನಿ ಇರುವ ಮಹಿಳಾ ಶಿಕ್ಷಕಿಯರು ನಾವು, ಹೇಳಿ ದೆಲ್ಲವನ್ನು ಕೇಳಲು ನಾವು ಯಾರೂ ಮೂಡಾತ್ಮರಲ್ಲ, ಯಾವ ದಬ್ಬಾಳಿಕೆಗೂ ಬಗ್ಗುವವರಲ್ಲ,ಗೊಡ್ಡು ಬೆದರಿಕೆ ಗಳಿಗೆ ಬೆವರುವವರಲ್ಲ.ನಮ್ಮ ಸಂಘಟನೆಯ ಪ್ರಮುಖ ಉದ್ದೇಶವೇ ನಮ್ಮ ರಕ್ಷಣೆ, ನಮ್ಮ ಜವಾಬ್ದಾರಿ,ನಮ್ಮ ಸಂಘಟನೆ ಯಾವ ಪುರುಷ ವಿರೋಧಿ ಸಂಘಟನೆ ಅಲ್ಲ ಎಲ್ಲರ ಸಹಕಾರ ಸಹಯೋಗದಿಂದ ಬೆಳೆಯುತ್ತಿರುವ ಸಂಘಟನೆಯಾಗಿದೆ.ಸಹಕರಿಸುವ ಎಲ್ಲಾ ಸಂಘಟನೆಗ ಳಿಗೂ ನಮ್ಮ ಸಹಕಾರ,ನಮ್ಮ ಬೆಂಬಲವಿದೆ. ಸಹಯೋಗ ದಿಂದ ನಡೆಯಲು ನಾವು ಸಿದ್ದರಿದ್ದೇವೆ ಆದರೆ ಸ್ವಾಭಿಮಾ ನಕ್ಕೆ ದಕ್ಕೆಯಾದರೆ ಸಹಿಸುವರು ನಾವಲ್ಲ,ನಮ್ಮ ಸಂಘ, ನಮ್ಮ ಹೆಮ್ಮೆ ನಮ್ಮ ಸ್ವಾಭಿಮಾನ.