ತುಮಕೂರು-
ಅಮೇರಿಕಾದಲ್ಲಿನ ಕೊರೋನಾ ಸಂಬಂಧಿಸಿದ ಪೈಜರ್ ಲಸಿಕೆಯ ಮೊದಲ ಡೋಸ್ ನ್ನು ತುಮಕೂರು ಜಿಲ್ಲೆ ಶಿರಾ ಮೂಲದ ವೈದ್ಯರೊಬ್ಬರು ಹಾಕಿಸಿಕೊಂಡಿದ್ದಾರೆ. ಡಾ. ಅರುಣ್ ರಂಗನಾಥ್ ಲಸಿಕೆಯ ಮೊದಲ ಡೋಸ್ ನ್ನು ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಿಂದಲೂ ಅಮೇರಿಕಾದಲ್ಲಿ ದಿನದ 15 ಗಂಟೆಗಳ ಕಾಲ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿರುವ ವೈದ್ಯ ಡಾ.ರಂಗನಾಥ್ ಅಮೇರಿಕಾದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ.
ಅಮೇರಿಕಾದಲ್ಲಿ ಪೈಸರ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದರೂ ಅಡ್ಡಪರಿಣಾಮದ ಭಯ ಜನರಲ್ಲಿ ಇದೆ. ಈ ನಡುವೆ ವೈದ್ಯ ಡಾ.ರಂಗನಾಥ್ ಮೊದಲ ಹಂತವಾಗಿ ಕಳೆದ ಎರಡು ದಿನಗಳ ಹಿಂದಷ್ಟೇ 3 ಸಿಸಿ ಲಸಿಕೆಯ ಹನಿಯನ್ನು ಪಡೆದಿದ್ದು ಕೋವಿಡ್ ಲಸಿಕೆಯ ಫಲಿತಾಂಶಕ್ಕೆ ಇವರು ಮುನ್ನುಡಿ ಬರೆದಿದ್ದಾರೆ.
ಅಲ್ಲದೇ ಈ ಮೂಲಕ ಕರೋನಾ ಲಸಿಕೆಯಿಂದ ಅಡ್ಡ ಪರಿಣಾಮಗಳಾಗುತ್ತಿವೆ ಎನ್ನುವವರಿಗೆ ತಾವೇ ಪ್ರಾಯೋಗಿಕವಾಗಿ ಇವರು ಈ ಒಂದು ಲಸಿಕೆಯನ್ನು ಹಾಕಿಸಿಕೊಂಡು ಹೊಸದಾದ ಮುನ್ನುಡಿಯನ್ನು ರಾಜ್ಯದ ವೈಧ್ಯರು ದೂರದ ಅಮೇರಿಕಾದಲ್ಲಿ ಇತಿಹಾಸವೊಂದನ್ನು ಬರೆದಿದ್ದಾರೆ.