ಹುಬ್ಬಳ್ಳಿ –
ನವನಗರದಲ್ಲಿ ವಕೀಲರ ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣದಲ್ಲಿ ನವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿದ್ದಾರೆ.ಪೊಲೀಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ್ ರನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿನ CSB ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ನವನಗರ ದ ಕರ್ನಾಟಕ ಸರ್ಕಲ್ ನಲ್ಲಿ ವಕೀಲ ವಿನೋದ ಪಾಟೀಲ್ ಇನ್ನಿಬ್ಬರು ಜೊತೆಯಲ್ಲಿ ಗಲಾಟೆ ಮಾಡುತ್ತಿದ್ದರು. ವಿಷಯ ತಿಳಿದ ಇನ್ಸ್ಪೆಕ್ಟರ್ ಸ್ಥಳಕ್ಕೆ ಹೋಗಿ ಬುದ್ದಿ ಹೇಳಿದರು ಇವರೊಂದಿಗೆ ವಕೀಲ ವಿನೋದ ಪಾಟೀಲ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕೊನೆಗೆ ವಕೀಲರ ವಿನೋದ ಪಾಟೀಲ್ ಸೇರಿದಂತೆ ಮೂವರ ಮೇಲೆ ಇನ್ಸ್ಪೆಕ್ಟರ್ ಪ್ರಭು ಸೂರಿನ್ ದೂರು ದಾಖಲಿಸಿ ಜೈಲಿಗೆ ಕಳಿಸಿದ್ದರು.ಇದರ ಬೆನ್ನಲ್ಲೇ ಇತ್ತ ಧಾರವಾಡದಲ್ಲಿ ವಕೀಲರು ಪ್ರತಿಭಟನೆ ಮಾಡಿ ವಕೀಲರ ಪೊಲೀಸರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು. ಅಲ್ಲದೇ ಸೋಮವಾರದ ಒಳಗಾಗಿ ಕ್ರಮ ಕೈಗೊಳ್ಳಲು ಗಡುವು ನೀಡಿದ್ದರು.ಇವೆಲ್ಲದರ ನಡುವೆ ಐಜಿಪಿ ರಾಘವೇಂದ್ರ ಸುಹಾಸ್ ನಿನ್ನೆ ಧಾರವಾಡದಲ್ಲಿ ರಾಜಿ ಸಂಧಾನ ಮಾಡಿದ್ದರು. ಕೊನೆಗೂ ನಾಳೆ ಬೆಳಗಾದರೆ ಮತ್ತೆ ವಕೀಲರು ಸಭೆ ಮಾಡ್ತಾರೆ ಎಂಬ ಕಾರಣಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಭು ಸೂರಿನ್ ರನ್ನು ಎತ್ತಂಗಡಿ ಮಾಡಿದ್ದಾರೆ.
ನವನಗರ ಪೊಲೀಸ್ ಠಾಣೆ ಯಿಂದ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ CSB ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ಪೊಲೀಸ್ ಆಯುಕ್ತ ಲಾಬುರಾಮ್ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರಂತೆ. ಇನ್ನೂ ನವನಗರ ಪೊಲೀಸ್ ಠಾಣೆಯ ಮೂರು ನಾಲ್ಕು ಸಿಬ್ಬಂದಿ ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಇವೆಲ್ಲದರ ನಡುವೆ ಪೊಲೀಸರು ಈ ಒಂದು ಪ್ರಕರಣದಲ್ಲಿ ಪೊಲೀಸರು ಮಾಡಿದ್ದ ತಪ್ಪಾದರು ಏನು ಈ ಒಂದು ಪ್ರಶ್ನೆಗೆ ಪೊಲೀಸರ ಮೇಲೆ ಶಿಸ್ತು ಕ್ರಮ ಕೈಗೊಂಡ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕು.