ಬೆಳಗಾವಿ –
ಕೇಂದ್ರದ ಮಾಜಿ ಸಚಿವ ರೈತ ಹೋರಾಟಗಾರ ಬಾಬಾಗೌಡ ಪಾಟೀಲ ನಿಧನರಾಗಿದ್ದಾರೆ. ಅನಾ ರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾದರು.ಇನ್ನೂ ಕೆಲ ದಿನಗಳಿಂದ ಅನಾರೋ ಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಬಾಗೌಡ ಪಾಟೀಲರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
1945 ಜನವರಿ 6 ರಂದು ಜನಿಸಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.1998 ರಲ್ಲಿ ಬೆಳಗಾವಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ರೈತ ಚಳವಳಿ ಮೂಲಕವೇ ತಮ್ಮನ್ನು ಗುರುತಿಸಿಕೊಂಡಿದ್ದರು.ಅಪ್ಪಟ ರೈತ ಹೋರಾಟಗಾರ ರಾಗಿದ್ದ ಬಾಬಾಗೌಡ ಪಾಟೀಲ್ ರು ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ಬಿಜೆಪಿ ಜನತಾದಳ (ಎಸ್), ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ಪಕ್ಷ ಗಳಿಗೆ ಆಗಾಗ ಪಕ್ಷಾಂತರ ಗೊಳ್ಳುತ್ತಿದ್ದರು.ಎಲ್ಲ ಪಕ್ಷಗಳಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದರು.ಬೆಳಗಾವಿ ಹಾಗೂ ಧಾರವಾಡ ಭಾಗ ದಲ್ಲಿ ಅನೇಕ ರೈತ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿ ದ್ದರುಈ ಮಹಾನ್ ನಾಯಕ ಇನ್ನೂ ನೆನಪು ಮಾತ್ರ. ಸಾಧನೆ ಹೋರಾಟವನ್ನು ನೆನಪಾಗಿಸಿ ಮೆರೆಯಾ ದರು ಬಾಬಾಗೌಡ ಪಾಟೀಲರು.