ಬೆಳಗಾವಿ –
ಮಾಜಿ ಸಚಿವ ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರಿ ಹೃದಯಾಘಾತದಿಂದ ನಿಧನ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆದುಕೊಂಡರು.

ನಿಧನದ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಹಿಂಡಲಗಾ ಜೈಲಿನಿಂದ ಸವದತ್ತಿಗೆ ಆಗಮಿಸಿ ಅಂತಿಮ ದರ್ಶನವನ್ನು ಪಡೆದುಕೊಂಡರು.

ಹಿಂಡಲಗಾ ಜೈಲಿನಿಂದ ಸವದತ್ತಿಗೆ ಆಗಮಿಸಿ ಮೃತ ಮಾವ ಗಂಗಪ್ಪ ಶಿಂತ್ರೆ ಅಂತಿಮ ದರ್ಶನ ಪಡೆದರು ವಿನಯ್ ಕುಲಕರ್ಣಿ.

ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ.ಬೀಗಿ ಪೊಲೀಸ್ ಭದ್ರೆತೆಯಲ್ಲಿ ಕರೆದುಕೊಂಡು ಬಂದ ಪೊಲೀಸರು ಮಾವ ಗಂಗಪ್ಪ ಶಿಂತ್ರ ಅಂತಿಮ ದರ್ಶನ ಪಡೆದುಕೊಂಡರು.

ಮಾವನ ಅಂತ್ಯಕ್ರಿಯೆ ಮುಗಿಸಿ ಮತ್ತೆ ವಿನಯ ಕುಲಕರ್ಣಿ ವಾಪಸ್ ಹಿಂಡಲಗಾ ಜೈಲಿಗೆ ಬಂದರು.ಮತ್ತೆ ಜೈಲು ಹಕ್ಕಿಯಾದರು ಮಾಜಿ ಸಚಿವ ವಿನಯ ಕುಲಕರ್ಣಿ.ಪೊಲೀಸ್ ಭದ್ರತೆಯಲ್ಲಿ ಮರಳಿ ಜೈಲು ಗೂಡು ಸೇರಿದ ಮಾಜಿ ಸಚಿವ ವಿನಯ್ ಕುಲಕರ್ಣಿ.

ಸವದತ್ತಿಯಲ್ಲಿ ನಡೆದ ಮಾವ ಗಂಗಪ್ಪ ಶಿಂತ್ರೆ ಅಂತ್ಯಕ್ರಿಯೆಗೆ ತೆರಳಿದ್ದ ವಿನಯ್.ಅಂತ್ಯಕ್ರಿಯೆ ಯಲ್ಲಿ ಭಾಗಿಯಾಗಲು ನಾಲ್ಕು ಗಂಟೆ ಸಮಯ ಅವಕಾಶ ನೀಡಿದ್ದ ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯ.

ನ್ಯಾಯಾಲಯದ ಸಮಯ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಹಿಂಡಲಗಾ ಜೈಲಿಗೆ ಆಗಮಿಸಿದರು ವಿನಯ್ ಕುಲಕರ್ಣಿ.ಪೊಲೀಸ್ ಭದ್ರತೆಯಲ್ಲಿ ಜೈಲು ಗೂಡು ಸೇರಿದರು.