This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Local News

ತೆನೆ ಭಾರ ಇಳಿಸಿ ಕೈ ಭಾರ ಹೊತ್ತುಕೊಳ್ಳಲಿರುವ ಮಾಜಿ ಶಾಸಕ ಎನ್ ಹೆಚ್ ಕೊನರಡ್ಡಿ – ನಾಳೆ ಬೆಳಗಾವಿಯ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆ…..

WhatsApp Group Join Now
Telegram Group Join Now

ಧಾರವಾಡ –

ಕೊನೆಗೂ ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಹೆಚ್ ಕೊನರಡ್ಡಿ ನಾಳೆ ಕಾಂಗ್ರೇಸ್ ಪಕ್ಷದವನ್ನು ಸೇರ್ಪಡೆಯಾಗಲಿದ್ದಾರೆ.ಕಳೆದ ಹಲವಾರು ದಿನಗಳಿಂದ ಗುಸು ಗುಸು ಆಗಿ ಕೇಳಿ ಬರುತ್ತಿದ್ದ ಈ ಒಂದು ಸುದ್ದಿಗೆ ನಾಳೆ ಅಧಿಕೃತವಾದ ಉತ್ತರ ಬೆಳಗಾವಿ ಯಲ್ಲಿ ಸಿಗಲಿದೆ.

ಬೆಳಗಾವಿಯ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಕೊನರಡ್ಡಿಯವರು ಅಧಿಕೃತ ವಾಗಿ ಕಾಂಗ್ರೇಸ್ ಪಕ್ಷದ ಕೈ ಹಿಡಿಯಲಿದ್ದಾರೆ.

ಇನ್ನೇನು ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣೆ ಹತ್ತಿರ ಬರುತ್ತಿ ದ್ದಂತೆ ಇವರ ಸೇರ್ಪಡೆ ಕುತೂಹಲ ಕೇರಳಿಸಿದ್ದು ಜೆಡಿಎಸ್ ಪಕ್ಷದ ವರಿಷ್ಠರಿಗೆ ಉತ್ತರ ಕರ್ನಾಟದಲ್ಲಿ ಇವರು ತುಂಬಾ ಆಪ್ತರಾಗಿದ್ದು ಇವರ ರಾಜೀನಾಮೆಯಿಂದ ಈ ಒಂದು ಭಾಗದಲ್ಲಿ ಜೆಡಿಎಸ್ ಪಕ್ಷದ ಮತ್ತೊಂದು ವಿಕೇಟ್ ಪತನ ವಾದಂತಾಗಿದೆ.

ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ


Google News

 

 

WhatsApp Group Join Now
Telegram Group Join Now
Suddi Sante Desk