ಧಾರವಾಡ –
ಧಾರವಾಡದ ನಿಗದಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಪ್ಪ ದಾಸನಕೊಪ್ಪ ನಿಧನರಾಗಿದ್ದಾರೆ. ಹೌದು ಕೋವಿಡ್ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ನಿಗದಿ ಗ್ರಾಮ ಪಂಚಾಯತಿ ಸದಸ್ಯರಾಗಿ ಮೂರನೆಯ ಬಾರಿಗೆ ಆಯ್ಕೆಯಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ದ್ದರು. ಫೆಬ್ರುವರಿ 23 ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಇವರು ಕೆಲ ದಿನಗಳ ಕಾಲ ಕಾರ್ಯ ಮಾಡಿ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಜನ ನಾಯಕ ಜನ ಸೇವಕ ಎಂದೇ ಗ್ರಾಮದಲ್ಲಿ ಹೆಸರಾದ ಇವರು ಎಲ್ಲರ ಪ್ರೀತಿ ವಿಶ್ವಾಸ ಆದರ್ಶ ರಾಗಿದ್ದರು.
ಜನ ಸೇವೆಯನ್ನು ಮಾಡಬೇಕು ಅಂತಾ ಸ್ವತಃ ಜಮೀನನ್ನು ಮಾರಾಟ ಮಾಡಿ ಈಗಷ್ಟೇ ಚುನಾವಣೆ ಗೆ ಮಗನ ಕಾರನ್ನು ಮಾರಾಟ ಮಾಡಿ ಸ್ಪರ್ಧೆ ಮಾಡಿ ನಿಂತುಕೊಂಡು ಗೆಲುವು ಸಾಧಿಸಿದ್ದರು.ನಗರದ ರಾಮನಗೌಡ ಆಸ್ಪತ್ರೆಗೆ ದಾಖಲಾಗಿದ್ದ ಇವರು ಕಳೆದ ಇಪ್ಪತ್ತು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.ಚಿಕಿತ್ಸೆ ಫಲಿ ಸದೇ ಜನ ನಾಯಕ ಮರೆಯಾಗಿದ್ದಾರೆ.ತುಂಬಾ ಸಾಮಾಜಿಕ ಕಳಕಳಿ ಮತ್ತು ಗ್ರಾಮದ ಅಭಿವೃದ್ಧಿ ಬಗ್ಗೆ ಕನಸು ಹೊಂದಿದ್ದರು.ಹಲವಾರು ಸದಸ್ಯರು ಆಶ್ರಯ ಮನೆ ಕೊಡಲು ಹಣ ಪಡೆದ ವಿಚಾರ ತಿಳಿದು ಗ್ರಾಮ ಸಭೆಗಳಲ್ಲಿ ಎಲ್ಲರನ್ನೂ ಬೈದು ಗ್ರಾಮ ದ ಅಭಿವೃದ್ದಿ ಬಗ್ಗೆ ಚಿಂತನೆ ಮಾಡುತಿದ್ದರು ಇವರು.
ಮೃತರಾದ ನಾಗಪ್ಪ ದಾಸನಕೊಪ್ಪ ಇವರಿಗೆ ಮಗ ಸಂತೋಷ ದಾಸನಾಕೊಪ್ಪ. ಹೆಂಡತಿ ಶಾಂತಾ ನಾಗಪ್ಪ ದಾಸಾನಕೊಪ್ಪ. ಗುರುನಾಥ ಮಡಿವಾಳ ರ,ಮಗ ಮಂಜುನಾಥ ದಷನಕೊಪ್ಪ.ಅಳಿಯ ಮಂಜುನಾಥ ಹಳಿಯಾಳ. ಮತ್ತು ನಿಗದಿ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು ಹಾಗೇ ನಿಂಗಪ್ಪ ಮಡಿವಾಳರ,ಮಲ್ಲನಗೌಡ ಪಾಟೀಲ, ಚೋಳಪ್ಪ ಬಾಣದ,ಸುಭಾಷ್ ನಾಯ್ಕರ್,ಧ್ಯಾಮಣ್ಣ ರೇವನ್ನ ವರ,ಕಲ್ಲನಗೌಡ ಪಾಟೀಲ, ಶಿವಾನಂದ ಕಮಲಾ ಪೂರ ,ನಾಗಪ್ಪ ಜೋಡಳ್ಳಿ,ಬಾಳು ಹಂಗರಕಿ, ಹನುಮಂತ ಅಂಬಲ್ಲೇನವರ,ಪಾರವ್ವ ಜೋಡಳ್ಳಿ, ಫಕೀರಪ್ಪ ಜಗದೆಪ್ಪನವರ,ವಿಜಯ ಕುಂಬಾರ, ಕಲ್ಲಪ್ಪ ಜೋಡಳ್ಳಿ, ಷಣ್ಮುಖ ಹಳಿಯಾಳ ಸೇರಿದಂತೆ ಗ್ರಾಮದ ಗುರು ಹಿರಿಯರು ಸಂತಾಪ ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿದರು.