ಕೇರಳ –
ನಾವುಗಳು ಬದಲಾವಣೆ ಈ ಒಂದು ಆಧುನಿಕತೆಯ ಜಗತ್ತಿನ ನಡುವೆ ಇನ್ನೂ ಮೂಲಭೂತ ಸೌಕರ್ಯಗ ಳಿಲ್ಲದೇ ಬದುಕುತ್ತಿದ್ದೇವೆ ಎನ್ನೊದಕ್ಕೆ ಇಲ್ಲೊಬ್ಬ ಶಿಕ್ಷಕರೇ ಈ ಒಂದು ಮಾತಿಗೆ ಸಾಕ್ಷಿ.ಏನೇಲ್ಲಾ ಹೈ ಪೈ ಜಗತ್ತಿನ ನಡುವೆ ನಾವು ಇನ್ನೂ ಇದ್ದೇವಿ ಗ್ರಾಮಗಳು ವಂಚಿತವಾಗಿವೆ ಎಂಬ ಮಾತು ಈಗಲೂ ಸತ್ಯವಾಗಿ ದ್ದು ಈ ಶಿಕ್ಷಕ ಜೀವಂತ ಉದಾಹರಣೆಗೆ
ಹೌದು ಒಂದು ಕಡೆ ಶಾಲೆಗೆ ಹೋಗಬೇಕು ಎಂದರೆ ಬಸ್ ಗಳ ಸೌಲಭ್ಯ ವಿಲ್ಲ ಹೀಗಾಗಿ 7 ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಪಾಠ ಮಾಡಲು ಹೋಗಬೇಕು.ಅದರಲ್ಲೂ ಬುಡಕಟ್ಟು ಜನಾಂಗ ದವರು ಇರುವ ಕಡೆ ಶಿಕ್ಷಕ ವೃತ್ತಿ ಮಾಡಲು ಅನೇಕ ರು ಹಿಂದೇಟು ಹಾಕುವ ಈ ಕಾಲದಲ್ಲಿ ಸುಕುಮಾರ ನ್ ಮಾತ್ರ ಕಟ್ಟುನಾಯ್ಕರ್ ಸಮುದಾಯಕ್ಕೆ ಬರೋಬ್ಬರಿ 14 ವರ್ಷಗಳಿಂದ ಪಾಠ ಮಾಡ್ತಿದ್ದಾರೆ.
ಬುಡಕಟ್ಟು ಜನಾಂಗದವರು ಕಲಿಕೆಯಲ್ಲಿ ಉದ್ಯೋ ಗದಲ್ಲಿ ಹಿಂದುಳಿದಿದ್ದರೂ ಸಹ ಅದರ ಬಗ್ಗೆ ತಲೆಕೆಡಿ ಸಿಕೊಳ್ಳುವವರು ಯಾರಿಲ್ಲ. ಆದರೆ ಸುಕುಮಾರನ್ ಟಿಸಿ ಎಂಬ ಸಾಮಾನ್ಯ ವ್ಯಕ್ತಿ ಈ ಮಾತಿಗೆ ವಿರುದ್ಧ ವಾಗಿ ನಿಂತಿದ್ದಾರೆ.2001ರ ಜನವರಿ 1ನೇ ತಾರೀಖಿ ನಂದು ವಯಕುನಾಡಿನ ಚೆಕ್ಕಡಿಯ ಅರಣ್ಯ ಪ್ರದೇಶ ದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಪಾಠ ಕಲಿಸುವ ಜವಾಬ್ದಾರಿಯನ್ನು ಸುಕುಮಾರನ್ ಗೆ ನೀಡಲಾಯ್ತು.
ಕೇರಳದ ಡಿಪಿಇಪಿ ಯೋಜನೆಯಿಂದಾಗಿ ಬುಡಕಟ್ಟು ಜನಾಂಗಕ್ಕೂ ಶಿಕ್ಷಣ ಸಿಗುವಂತೆ ಮಾಡಿದೆ.ಹೊರಗಿನ ಸಮುದಾಯದೊಂದಿಗೆ ಯಾವುದೇ ಸಂದರ್ಭ ಹೊಂದಿಲ್ಲದ ಜನರು ಮೊದಲ ಬಾರಿಗೆ ಸುಕುಮಾರ ನ್ ರನ್ನು ಭೇಟಿ ಮಾಡಿದ್ದರು. ಇಲ್ಲಿಂದ ಶುರುವಾದ ಬರೋಬ್ಬರಿ 14 ವರ್ಷಗಳ ಕಾಲ ಸಾಗಿದ್ದು ಪ್ರತಿದಿನ 7 ಕಿಲೋಮೀಟರ್ ದೂರ ದಟ್ಟ ಕಾಡಿನಲ್ಲಿ ನಡೆದು ಕೊಂಡೇ ಸಾಗಿ ಪಾಠ ಮಾಡ್ತಿದ್ದಾರೆ.ನಾವುಗಳು ಎಷ್ಟೋ ಹೈ ಪೈ ಆಗಿದ್ದರೂ ಇನ್ನೂ ಮೂಲಭೂತ ಸೌಕರ್ಯ ಗಳಿಲ್ಲದೇ ನಮ್ಮ ಗ್ರಾಮಗಳು ಇವೆ ಎನ್ನೊದಕ್ಕೆ ಈ ಗ್ರಾಮ ಸಾಕ್ಷಿಯಾಗಿದ್ದು ಯಾವು ದಕ್ಕೂ ಹಿಂದೆ ಮುಂದೆ ನೋಡದೆ ತಪ್ಪದೇ ಶಾಲೆಗೆ ನಡೆದುಕೊಂಡು ಹೋಗುವ ಇವರ ಕಾರ್ಯ ಮೆಚ್ಚು ವಂತದ್ದು ಇನ್ನಾದರೂ ಇತ್ತ ಗಮನಹರಿಸಿ ಸೌಲಭ್ಯ ಗಳನ್ನು ಒದಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕು