ಧಾರವಾಡ –
ಅಂತೂ ಇಂತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಯ ಎರಡನೇ ಪಟ್ಟಿ ಬಿಡುಗಡೆ ಆಗಿದೆ.ಹೌದು ಇದರೊಂದಿಗೆ ಚುನಾವಣೆಗೆ ಸ್ಪರ್ಧಿಸ ಲಿರುವ 45 ಅಧಿಕೃತ ಅಭ್ಯರ್ಥಿಗಳ ಅಂತಿಮ ಪಟ್ಟಿ ಯನ್ನು ಭಾರತೀಯ ಜನತಾ ಪಾರ್ಟಿ ಇಂದು ಬಿಡುಗಡೆಗೊಳಿಸಿದೆ.

ಅವಳಿನಗರದ ಒಟ್ಟು 82 ವಾರ್ಡ್ ಗಳ ಪೈಕಿ ಮೊದಲ ಪಟ್ಟಿಯಲ್ಲಿ 30 ವಾರ್ಡ್ ಗಳಿಗೆ ಅಭ್ಯರ್ಥಿ ಗಳ ಹೆಸರನ್ನು ಮತ್ತು ಇಂದು ಬಿಡುಗಡೆಯಾದ 2ನೇ ಪಟ್ಟಿಯಲ್ಲಿ 15 ಜನರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದಾರೆ.ಭಾರೀ ಸಂಖ್ಯೆಯಲ್ಲಿ ಆಕಾಂ ಕ್ಷಿಗಳ ಆಯಾ ವಾರ್ಡ್ ಗಳಲ್ಲಿ ಕಂಡು ಬರುತ್ತಿದ್ದ ರಿಂದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸು ವುದು ಪಕ್ಷದ ಹಿರಿಯ ನಾಯಕರಿಗೆ ದೊಡ್ಡ ಸವಾಲಾಗಿದ್ದರಿಂದ ಹಂತ ಹಂತವಾಗಿ ಪಟ್ಟಿ ಬಿಡುಗಡೆ ಆಗುತ್ತಿದ್ದು

ಇನ್ನೂ 37ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿ ಯಲ್ಲಿದೆ.ಪ್ರಥಮ ಪಟ್ಟಿಯಂತೆ ಕೆಲ ಹಳೆಯ ಮುಖಗಳಿಗೆ ಮಣೆ ಹಾಕಲಾಗಿದ್ದರೇ, ಎರಡನೇ ಪಟ್ಟಿಯಲ್ಲಿ ಹೊಸಬರಿಗೆ ಮಣೆ ಹಾಕಲಾಗಿದೆ. ಇನ್ನೂ ನಾಮಪತ್ರ ಸಲ್ಲಿಕೆಗೆ ನಾಡಿದ್ದು ಕೊನೆ ದಿನ ಆದ್ದರಿಂದ ಆಮ್ ಆದ್ಮಿ ಪಾರ್ಟಿ ಮತ್ತು ಜೆಡಿ.ಎಸ್. ನ ಹಲವು ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
