ಹುಬ್ಬಳ್ಳಿ ಧಾರವಾಡ –
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ
REF.NO.192/2021-2022
DATE09-01-2022
??ನಿವೇದನೆ??
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾ.ಶಾ.ಶಿ.ಸಂಘ.ರಾಜ್ಯ ಹಾಗೂ ಎಲ್ಲಾ ಜಿಲ್ಲಾ/ತಾಲೂಕಾ ಘಟಕಗಳು & ನಾಡಿನ ಸಮಸ್ತ ಗುರು ಬಳಗದವರಲ್ಲಿ ನಿವೇದನೆ ಮಾಡಿಕೊಳ್ಳುತ್ತಿರುವುದೇನೆಂದರೆ
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ರಾಜ್ಯ ಘಟಕ ಹುಬ್ಬಳ್ಳಿ ದಿನಾಂಕ 25-12-2021 ರಂದು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಾ ಮಠದ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ರಾಜ್ಯ ಮಟ್ಟದ ಎರಡನೇ ಮಹಾ ಸಭೆಯಲ್ಲಿ ತೀರ್ಮಾನಿಸಿದಂತೆ ರಾಜ್ಯದ ಎಲ್ಲ ಗ್ರಾಮೀಣ ಭಾಗದ ಶೇಕಡಾ 8 ರೂ. ಮನೆ ಬಾಡಿಗೆ ಭತ್ಯೆ ಪಡೆಯುವಂತಹ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ -ಶಿಕ್ಷಕಿಯರು ₹500 ಅನ್ನು ಒಂದು ಬಾರಿ ಮಾತ್ರ ನೀಡಿ ಆಜೀವ ಸದಸ್ಯತ್ವ ಪಡೆಯುವ ಬಗ್ಗೆ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿದ್ದಾರೆ.
ಯಾರು 500 ರೂಪಾಯಿಗಳನ್ನು ಸಂದಾಯ ಮಾಡಿ ಆಜೀವ ಸದಸ್ಯತ್ವ ಪಡೆದುಕೊಳ್ಳುತ್ತಾರೆಯೋ ಅವರು ಮಾತ್ರ ಮುಂಬರುವ 2023 ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಅರ್ಹರಾಗಿರುತ್ತಾರೆ.
ಹಾಗೂ ಯಾರು 500/- ರೂ ಕೊಟ್ಟು ಸಂದಾಯ ಮಾಡಿ ರಸೀದಿ ಪಡೆದಿರುತ್ತಾರೆಯೋ ಅವರು ಮಾತ್ರ ಮತದಾರರ ಪಟ್ಟಿಯಲ್ಲಿ ಬರುತ್ತಾರೆ.
ತಾಲೂಕಾ /ಜಿಲ್ಲಾ/ ರಾಜ್ಯ ಮಟ್ಟದಲ್ಲಿ ನಡೆಯುವ ನಿರ್ದೇಶಕರ, ಪದಾಧಿಕಾರಿಗಳ ಚುನಾವಣೆಗೆ ಇದು ಕಡ್ಡಾಯವಾಗಿರುತ್ತದೆ ಎಂದು ರಾಜ್ಯಾಧ್ಯಕ್ಷರಾದ ಅಶೋಕ ಎಂ ಸಜ್ಜನ ಹಾಗೂ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ,ರಾಜ್ಯ ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ,ರಾಜ್ಯ ಕಾರ್ಯಾಧ್ಯಕ್ಷರುಗಳಾದ ಶರಣಪ್ಪಗೌಡ ಆರ್ ಕೆ ಶ್ರೀಮತಿ ಎಮ್.ವಿ,ಕುಸುಮಾ.ರಾಜ್ಯ ಕೋಶಾಧ್ಯಕ್ಷ ರಾದ ಬಿ ವಿ ಅಂಗಡಿ,ಹಾಗೂ ರಾಜ್ಯ ಘಟಕದ ರಾಜ್ಯ ಉಪಾಧ್ಯಕ್ಷರ ಗಳು,ರಾಜ್ಯ ಸಹ ಕಾರ್ಯದರ್ಶಿಗಳು,ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಯ ಸದಸ್ಯರೆಲ್ಲರೂ ರಾಜ್ಯದ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಮನವಿ ಮಾಡಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಪದಾಧಿಕಾರಿಗಳ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ
1.ರಾಜ್ಯಾಧ್ಯಕ್ಷರು-9036124574
2.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು -9741340206
ಗೌರವಾನ್ವಿತ ವಂದನೆಗಳೊಂದಿಗೆ
ತಮ್ಮೆಲ್ಲರ ಸೇವಾಕಾಂಕ್ಷಿಗಳು
ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು
KGRPSTA(R) STATE UNIT HUBBALLI