ಹಗರಿಬೊಮ್ಮನಹಳ್ಳಿ –
ಹೌದು ಅಂಗವಿಕಲ ಕೋಟಾದಡಿಯಲ್ಲಿ ಸರ್ಕಾರಿ ಶಿಕ್ಷಕ ಹುದ್ದೆಗೆ ಭರ್ತಿಯಾದ ಕೆಲವು ಶಿಕ್ಷಕರಿಗೆ ಇದೀಗ ಅಗ್ನಿ ಪರೀಕ್ಷೆ ಎದುರಾಗಿದೆ.ಹೌದು ಸರ್ಕಾರಿ ಶಿಕ್ಷಕ ಹುದ್ದೆಗೆ ನೇಮಕವಾದ ಹಲವರು ಸಲ್ಲಿಸಿರುವ ಅಂಗವಿಕಲತೆಯ ವೈದ್ಯಕೀಯ ಪ್ರಮಾಣಪತ್ರಗಳು ಖೊಟ್ಟಿಯಾಗಿರುವ ಸಾಧ್ಯತೆ ಇದೆ ಎನ್ನುವ ಅನುಮಾನದ ಹಿನ್ನಲೆಯಲ್ಲಿ ಸರ್ಕಾರ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸುತ್ತಿದೆ ರಾಜ್ಯ ಲೋಕಾಯುಕ್ತರಿಗೆ ಅಂಗವಿಕಲ ಶಿಕ್ಷಕರು ಸರ್ಕಾರಿ ನೌಕರಿಗೆ ನೇಮಕವಾಗುವಾಗ ನೀಡಿದ ವೈದ್ಯಕೀಯ ಪ್ರಮಾಣಪತ್ರಗಳು ಖೊಟ್ಟಿಯಾಗಿವೆ.ಅವುಗಳನ್ನು ಮರು ಪರೀಶೀಲಿಸುವಂತೆ ಸಾರ್ವಜನಿಕ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಇದರಂತೆ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಾಂತ 29 ಅಂಗವಿಕಲ ನೌಕರರು ಫೆ 28ರಂದು ಸೋಮವಾರ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾತಿಗಳೊಂದಿಗೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ.ಈಗ ನಡೆದಿರುವ ವೈದ್ಯಕೀಯ ಪರೀಕ್ಷೆ ಪ್ರಮಾಣಪತ್ರಗಳು ಪರೀಕ್ಷೆಗೊಳಗಾದ ಶಿಕ್ಷಕರ ಕೈಸೇರಿಲ್ಲ.ಬದಲಾಗಿ ನೇರವಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿವೆ.
ಪರೀಕ್ಷೆಗೊಳಗಾದ ಶಿಕ್ಷಕರು ಫಲಿತಾಂಶದ ಪ್ರಮಾಣ ಪತ್ರಗಳ ಬಗ್ಗೆ ಆತಂಕದಲ್ಲಿದ್ದಾರೆ.ಇದರೊಂದಿಗೆ ಪ್ರಾಮಾಣಿಕ ಶಿಕ್ಷಕರು ಪರೀಕ್ಷೆಗೊಳಗಾದ ವೇಳೆ ಅತ್ಯಂತ ಮುಜುಗರಕ್ಕೊಳಗಾದ ಪ್ರಸಂಗ ಅನುಭವಿಸಿದ್ದು
ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದಂತೆ ನಮ್ಮ ತಾಲೂಕಿನ ಅಂಗವಿಕಲ ಶಿಕ್ಷಕ ಸರ್ಕಾರಿ ನೌಕರರನ್ನು ವೈದ್ಯಕೀಯ ಮರು ಪರೀಕ್ಷೆಗೆ ಒಳಪಡಿಸಿ ಪ್ರಮಾಣ ಪತ್ರ ಗಳನ್ನು ಪರಿಶೀಲಿಸಲಾಗಿದೆ.ಶೀಘ್ರದಲ್ಲಿ ಫಲಿತಾಂಶ ಇಲಾಖೆಗೆ ಬರಲಿದೆ ಅಂತ ಹಗರಿಬೊಮ್ಮನಹಳ್ಳಿ ಬಿಇಒ ಎ.ಸಿ.ಆನಂದ ತಿಳಿಸಿದ್ದಾರೆ.
ಇನ್ನೂ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದ್ದು ನಮಗೆ ಅಂಗವಿಕಲರ ಮೀಸಲಾತಿಯಡಿ ಈ ನೌಕರಿ ಸಿಕ್ಕಿರುವುದು ಅಸಹಾಯಕ ರಾದ ನಮಗೆ ಮರು ಜೀವನವೇ ಸರಿ. ಪ್ರಾಮಾಣಿಕವಾಗಿರುವ ನಮಗೆ ಈ ಮರು ವೈದ್ಯಕೀಯ ಪರೀಕ್ಷೆಯಿಂದ ಮುಜುಗರ ಉಂಟುಮಾಡಿತು.ಆದರೂ, ಪರೀಕ್ಷೆಯ ನಂತರ ಫಲಿತಾಂಶದ ಬಗ್ಗೆ ಆತಂಕದಲ್ಲಿದ್ದೇವೆ ಅಂತಾ ಶಿಕ್ಷಕರೊಬ್ಬರು ಹೇಳಿದ್ದಾರೆ.