ಪಣಜಿ –
ಇನ್ನೇನು ಕೆಲವು ದಿನಗಳು ಅಷ್ಟೇ ಬಾಕಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ರಾಜ್ಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಅಂತಿಮ ಹಂತದ ಸಿದ್ದತೆಯನ್ನು ಮಾಡತಾ ಇದ್ದಾರೆ.ಹೀಗಿರುವಾಗ ಇತ್ತ ಗೋವಾದಲ್ಲಿ ಕನ್ನಡ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೌದು ಕರ್ನಾಟಕದಲ್ಲಿ ಜುಲೈ 19 ಮತ್ತು 22 ರಂದು ಹತ್ತನೇಯ ತರಗತಿ ಪರೀಕ್ಷೆ ನಿಗದಿ ಯಾಗಿದ್ದು, ಗೋವಾದಲ್ಲಿ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕಾರವಾರಕ್ಕೆ ಪರೀಕ್ಷೆಗೆ ಆಗಮಿಸಬೇಕಾಗಿದೆ.ಆದರೆ ಈ ವಿದ್ಯಾರ್ಥಿಗಳು ಕಾರವಾರಕ್ಕೆ ಪರೀಕ್ಷೆ ಬರೆಯಲು ಆಗಮಿಸಲು ಎರಡು ಬಾರಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳು ವುದು ಅನಿವಾರ್ಯ ಎಂಬಂತಾಗಿದೆ.ಗೋವಾದ ಬಿರ್ಲಾ ಮತ್ತು ಬೈನಾ ಕನ್ನಡ ಶಾಲೆಯಲ್ಲಿ ಹತ್ತನೇ ಯ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಗಳು ಪ್ರತಿ ವರ್ಷ ಕಾರವಾರದ ಉಳಗಾಕ್ಕೆ ಆಗಮಿಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕಳೆದ ವರ್ಷ ಕರೋನಾ ಭೀತಿಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಹತ್ತನೇಯ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗೋವಾ ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾ ಗಿತ್ತು. ಆದರೆ ಪ್ರಸಕ್ತ ವರ್ಷ ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿರುವುದರಿಂದ ಪರೀಕ್ಷೆ ತಪ್ಪಿಸಿದರೆ ಫೇಲ್ ಆಗುವ ಭೀತಿ ವಿದ್ಯಾರ್ಥಿ ಗಳಿಗೆ ಎದುರಾಗಿದೆ.
ಇನ್ನೂ ಪ್ರಮುಖವಾಗಿ ಗೋವಾ ವಾಸ್ಕೊದ ಬಿರ್ಲಾ ಕನ್ನಡ ಮಾಧ್ಯಮ ಶಾಲೆಯಲ್ಲಿ 44 ಜನ ವಿದ್ಯಾರ್ಥಿ ಗಳು ಮತ್ತು ಬೈನಾದ ಕನ್ನಡ ಮಾಧ್ಯಮ ಶಾಲೆಯಲ್ಲಿ 25 ಜನ ವಿದ್ಯಾರ್ಥಿಗಳು ಹತ್ತನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ಕರ್ನಾಟಕದ ಕಾರವಾರಕ್ಕೆ ಪರೀಕ್ಷೆ ಬರೆಯಲು ತೆರಳಬೇಕಾದರೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಒಂದು ಬಾರಿ ಕೋವಿಡ್ ತಪಾಸಣೆ ಮಾಡಿಸಿಕೊಂಡರೆ ಅದು ಕೇವಲ 72 ಗಂಟೆ ಮಾತ್ರ ವ್ಯಾಲಿಡ್ ಆಗಿರು ವುದರಿಂದ ಗೋವಾ ಕನ್ನಡ ಮಾಧ್ಯಮ ವಿದ್ಯಾರ್ಥಿ ಗಳು ಜುಲೈ 19 ಮತ್ತು 22 ರಂದು ಹೀಗೆ ಎರಡು ಬಾರಿ ಕೋವಿಡ್ ತಪಾಸಣೆಗೆ ಒಳಗಾಗುವುದು ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳು ಒಂದು ಕಡೆಗೆ ಪರೀಕ್ಷೆಯ ಸಿದ್ದತೆ ಮತ್ತೊಂದು ಕಡೆಗೆ ಕೋವಿ ಡ್ ಪರೀಕ್ಷೆ ರಾಜ್ಯ ಸರ್ಕಾರ ಈ ವಿದ್ಯಾರ್ಥಿ ಗಳಿಗೆ ಏನಾದರೂ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡುತ್ತದೆನಾ ಎಂಬುದನ್ನು ಕಾದು ನೋಡಬೇಕು