ಬೆಂಗಳೂರು –
ಬೆಂಗಳೂರು –
ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟ ಆರಂಭಗೊಂಡು ಇಂದಿಗೆ ಮೂರು ದಿನ ಕಳೆದಿವೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ OPS ಮಾಡು ಇಲ್ಲವೇ ಮಾಡಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭ ಟನೆಗೆ ಬೆಂಬಲ ಸೂಚಿಸಿದ ಇಂಡಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಯಶವಂತ ರಾಯಗೌಡ ವ್ಹಿ ಪಾಟೀಲ್ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತಿರುವ ವೇದಿಕೆಗೆ ಆಗಮಿಸಿ ಬೆಂಬಲ ನೀಡಿದರು
ಮಾಡು ಇಲ್ಲವೇ ಮಡಿ ವೇದಿಕೆಗೆ ಬಂದು ತಮ್ಮ ಬೆಂಬಲ ಸೂಚಿಸಿದ ಪ್ರಪ್ರಥಮ ಶಾಸಕರು. ನೌಕರರ ಸಂಧ್ಯಾಕಾಲದ ಬದುಕು ಚೆನ್ನಾಗಿರಲಿ ಎಲ್ಲಾ ನೌಕರರಿಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆಯಾಗಲು ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದಿಂದ ಧ್ವನಿ ಎತ್ತಲಾಗುವುದು ಎಂದು ವೇದಿಕೆಯ ಮುಖಾಂತರ ಭರವಸೆ ನೀಡಿದರು.
ಈಗಾಗಲೇ ನೌಕರರ ಹೋರಾಟಕ್ಕೆ 1ಲಕ್ಷ ರೂಪಾಯಿ ದೇಣಿಗೆಯನ್ನು ಶಾಸಕರು ಸಹ ನೀಡಿದ್ದಾರೆ.ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಗಟ್ಟಿ ಧ್ವನಿಯಾದ ಭೀಮ ತೀರದ ಭಾರ್ಗವ ನುಡಿದಂತೆ ನಡೆಯುವ ಇಂಡಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಯಶವಂತರಾಯಗೌಡ ವ್ಹಿ ಪಾಟೀಲ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.ಬೆಂಗಳೂರಿನ ವೇದಿಕೆ ಮುಖಾಂತರ ಬೆಂಬಲ ಸೂಚಿಸಲು ಶ್ರಮಿಸಿದ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಜನಸೇವಕ ಬಳಗಕ್ಕೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ವಿಜಯಪುರ ಮತ್ತು ತಾಲ್ಲೂಕು ಘಟಕ ಇಂಡಿ ರವರಿಗೆ ತುಂಬು ಹೃದಯದಿಂದ ಧನ್ಯವಾದಗ ಳನ್ನು ಅರ್ಪಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..