ನವದೆಹಲಿ –
ದಾದ್ರಾ ಮತ್ತು ನಗರ್ ಹವೇಲಿ ಸಂಸದ ಮೋಹನ್ ಡೇಲ್ಕರ್ ಮುಂಬೈನ ಹೋಟೆಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೋಹನ್ ಡೇಲ್ಕರ್ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಗೆ ಪೊಲೀಸರು ತಲುಪಿದ್ದಾರೆ. ಈ ಪ್ರಕರಣದ ತನಿಖೆ ಆರಂಭಿಸಲಾಗಿದೆ. ಮೋಹನ್ ಡೇಲ್ಕರ್ ಅವರು ಸ್ವತಂತ್ರ ಸಂಸತ್ ಸದಸ್ಯರಾ ಗಿದ್ದರು. 2019 ರ ಲೋಕಸಭಾ ಚುನಾವಣೆಗೂ ಮುನ್ನ ಮೋಹನ್ ಡೇಲ್ಕರ್ ಕಾಂಗ್ರೆಸ್ ತೊರೆದಿದ್ದರು.
ಕಳೆದ ವರ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮೋಹನ್ ಡೇಲ್ಕರ್ ಅವರು ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಸ್ಥಳೀಯ ಚುನಾವಣೆಗಾಗಿ ಜೆಡಿಯು ಜೊತೆ ಸಂಬಂಧ ಹೊಂದಿದ್ದರು.