This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ನಾಡೋಜ ಹಿರಿಯ ಕವಿ ಡಾ ಚನ್ನವೀರ ಕಣವಿ ಇನ್ನೂ ನೆನಪು ಮಾತ್ರ – ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕವಿ…..

WhatsApp Group Join Now
Telegram Group Join Now

ಧಾರವಾಡ –

ಕೋವಿಡ್‌ ಸೋಂಕಿನಿಂದಾಗ ಕಳೆದ ಕೆಲವು ದಿನಗಳಿಂದ ಧಾರವಾಡದ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚನ್ನವೀರ ಕಣವಿ ಅಸ್ತಂಗತರಾಗಿದ್ದಾರೆ.93 ವರ್ಷ ವಯಸ್ಸಾಗಿದ್ದ ಹಿರಿಯ ಕವಿ ಕೊನೆಗೂ ಚಿಕಿತ್ಸೆ ಫಲಸದೇ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.1928ರ ಜೂನ್‌ 28ರಂದು ಜನ್ಮ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಹುಟ್ಟಿದ್ದ ಕಣವಿಯವರ ತಂದೆ ಸಕ್ಕರೆಪ್ಪ ಗದಗ ತಾಲೂಕಿನ ಶಿರುಂದದಲ್ಲಿ ಶಿಕ್ಷಕರಾ ಗಿದ್ದರು.ಹೀಗಾಗಿ ಶಿರುಂದದಲ್ಲಿಯೇ ಕಣವಿಯವರು ಬಾಲ್ಯ ಕಳೆದಿದ್ದಾರೆ.ನಾಲ್ಕನೇ ತರಗತಿವರೆಗೆ ಶಿರುಂದದಲ್ಲಿಯೇ ಶಿಕ್ಷಣ ಪಡೆದ ಅವರು ಧಾರವಾಡ ತಾಲೂಕಿನ ಗರಗ ಶಾಲೆ ಯಲ್ಲಿ 7ನೇ ತರಗತಿವರೆಗೆ ಶಿಕ್ಷಣ ಪಡೆದರು.ಬಾಲ್ಯದಲ್ಲಿ ಗಾಂಧಿ ಟೋಪಿ ನಾಟಕದಲ್ಲಿ ಅಭಿನಯಿಸಿದ್ದ ಕಣವಿ ಯವರು ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದರು

ಧಾರವಾಡದ ಮುರುಘಾಮಠದಲ್ಲಿದ್ದುಕೊಂಡು ಹೈಸ್ಕೂಲ್ ಶಿಕ್ಷಣ ಪಡೆದು ಕರ್ನಾಟಕ ಕಾಲೇಜಿನಲ್ಲಿ ಬಿಎ ಶಿಕ್ಷಣ ಪಡೆದರು.ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಣವಿಯವರ ಕವನಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರು ಡಿವಿಜಿ.ಧಾರವಾಡದ ಮಾಳಮಡ್ಡಿಯಲ್ಲಿ ಕಾವ್ಯಾನುಭವ ಮಂಪಟ ಆರಂಭಿಸಿ ಕವಿತಾ ವಾಚನ ಅಭಿಯಾನ ನಡೆಸಿದ್ದ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ.ಪದವಿ ಪಡೆದರು.ಅದೇ ಕವಿವಿಯ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿದ್ದ ಅವರು.

1956ರಲ್ಲಿ ಅದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು.ಪತ್ನಿ ಶಾಂತಾದೇವಿ ಕೂಡ ಸಾಹಿತಿ, ಕನ್ನಡದ ಖ್ಯಾತಿ ಕತೆಗಾರ್ತಿಯಾಗಿದ್ದ ಅವರು ಇತ್ತೀಚೆಗೆ ನಿಧನರಾಗಿದ್ದರು.ಪತ್ನಿ ನಿಧನದ ಬಳಿಕ ಸ್ವಲ್ಪ ಲವಲವಿಕೆ ಕಳೆದುಕೊಂಡಿದ್ದರು ಕಣವಿಯವರು. ವಿಶ್ವಭಾರ ತಿಗೆ ಕನ್ನಡದಾರತಿ…ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ…ಹೂವು ಹೊರಳುವುವು ಸೂರ್ಯನ ಕಡೆಗೆ….ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ….ಜನಪ್ರಿಯ ಕಾವ್ಯಗಳು ಕವನ ಸಂಕಲನ
ಕಾವ್ಯಾಕ್ಷಿ,ಭಾವಜೀವಿ,ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ,ದಾರಿ ದೀಪ, ನೆಲ ಮುಗಿಲು,ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು,ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ, ಸೇರಿ 15ಕ್ಕೂ ಹೆಚ್ಚು ಕವನ ಸಂಕಲನ ಪ್ರಕಟವಾದವುಗಳಾಗಿದ್ದವು


ವಿಮರ್ಶಾ ಕೃತಿಗಳು
ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ವಿಮರ್ಶಾತ್ಮಕ ಕೃತಿಗಳು
ಮಕ್ಕಳ ಕೃತಿ:
ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ
ಪ್ರಶಸ್ತಿ ಮತ್ತು ಪುರಸ್ಕಾರಗಳು
1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ
2008ರ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ
ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ,
ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ನಿಧನರಾದ ಹಿರಿಯ ಕವಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ಪ್ರಸಾದ ಅಬ್ಬಯ್ಯ ಮಾಜಿ ಶಾಸಕಿ ಸೀಮಾ ಮಸೂತಿ,ಮಾಜಿ ಸಚಿವರಾದ ವಿನಯ ಕುಲಕರ್ಣಿ, ಸಂತೋಷ ಲಾಡ್.ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಸೇರಿದಂತೆ ಹಲವು ಗಣ್ಯರು ನಾಯಕರು ಜಿಲ್ಲೆಯ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಾಹಿತಿಗಳು ಅಭಿಮಾನಿಗಳು ಸೇರಿದಂತೆ ಹಲವು ಗಣ್ಯರು ಭಾವ ಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk