ಬೆಂಗಳೂರು –
ಇನ್ನೂ ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಲು ನಿವೃತ್ತ ಐ.ಎ.ಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದಲ್ಲಿ 26 ಸಮಿತಿಗಳನ್ನು ರಚಿಸಲಾಗಿದೆ ಹೌದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಈ ಒಂದು ಮಾಹಿತಿ ಯನ್ನು ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬರುವ ವರ್ಷದಿಂದ ಯೋಜನೆ ಜಾರಿಗೆ ತರುವ ಉದ್ದೇಶದಿಂದ ರಚನೆ ಮಾಡಲಾಗಿದೆ ಎಂದರು

ಅವುಗಳ ಮೂಲಕ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಪಡೆಯಲಾಗಿದೆ.ಪ್ರತಿ ಜಿಲ್ಲೆಗೆ ಬೇಕಾದ ಕೌಶಲ್ಯವನ್ನು ಒಳಗೊಂಡ ಪಠ್ಯಕ್ರಮ ಜಾರಿಗೆ ಸಿದ್ಧತೆ ನಡೆದಿದೆ ಎಂದರು.