ಕಲಘಟಗಿ –
ಮಾಜಿ ಸಚಿವ ಸಂತೋಷ ಲಾಡ್ ಕಳೆದ ಒಂದು ವಾರದಿಂದ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರ ದಲ್ಲಿ ಠಿಕಾಣೆ ಹೂಡಿದಿದ್ದಾರೆ.ಸಧ್ಯ ಅಧಿಕಾರದಲ್ಲಿ ಇಲ್ಲ ಆದರೂ ಕೂಡಾ ತಮ್ಮ ಕರ್ತವ್ಯ ಜವಾಬ್ದಾರಿ ಯನ್ನು ಮಾಡುತ್ತಿರುವ ಇವರು ಈಗಾಗಲೇ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕ್ಷೇತ್ರದಲ್ಲಿನ 50 ಸಾವಿರ ಕುಟುಂಬಗಳಿಗೆ ಅಕ್ಕಿಯನ್ನು ನೀಡುತ್ತಿದ್ದಾರೆ.

ಪ್ರತಿ ಯೊಂದು ಕುಟುಂಬಕ್ಕೂ ನೆರವನ್ನು ನೀಡುತ್ತಿ ದ್ದು ಸಾಮಾನ್ಯವಾಗಿ ಈ ಒಂದು ಕೆಲಸವನ್ನು ಸಧ್ಯ ಅಧಿಕಾರದಲ್ಲಿದ್ದವರು ಸರ್ಕಾರವನ್ನು ನಡೆಸುವವರು ಇಲ್ಲವೇ ಅಧಿಕಾರಿಗಳು ಮಾಡಬೇಕು ಆದರೆ ಅದ ನ್ನೇಲ್ಲವನ್ನು ನೊಡದೇ ಸಂತೋಷ ಲಾಡ್ ಸಧ್ಯ ಕಲಘಟಗಿ ತಾಲ್ಲೂಕಿನಲ್ಲಿ ಯಾರು ಕೂಡಾ ಹಸಿವಿ ನಿಂದ ಬಳಲಬಾರದು ಹಾಗೇ ಸಮಸ್ಯೆಯನ್ನು ಅನುಭವಿಸಬಾರದು ಎಂದುಕೊಂಡು 50 ಸಾವಿರ ಮನೆಗಳಿಗೆ ಅಕ್ಕಿಯನ್ನು ವಿತರಣೆ ಮಾಡತಾ ಇದ್ದಾರೆ ಇದರ ತಾವೇ ಸ್ವತಃ ಗ್ರಾಮ ಗ್ರಾಮಗಳಿಗೆ ತೆರಳಿ ಕೋವಿಡ್ ನಿಂದಾಗಿ ಸಧ್ಯ ಮತದಾರರು ಜನರು ಹೇಗೆ ಇದ್ದಾರೆ ಏನೇಲ್ಲಾ ಸಮಸ್ಯೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಇದೇಲ್ಲವನ್ನು ಇವರು ಮಾತ ನಾಡಿಸಿಕೊಂಡು ಮಾಹಿತಿಯನ್ನು ಪಡೆದುಕೊಳ್ಳುತ್ತಿ ದ್ದಾರೆ


ಇದರೊಂದಿಗೆ ಗ್ರಾಮಕ್ಕೆ ಆಗಮಿಸಿದ ಸಂತೋಷ ಲಾಡ್ ರನ್ನು ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಮಾಡಿಕೊಳ್ಳುತ್ತಿರುವ ಚಿತ್ರಣ ಕ್ಷೇತ್ರದಲ್ಲಿ ಕಂಡು ಬರುತ್ತಿದೆ ತಮ್ಮ ಮನೆಯ ಮಗನಂತೆ ಮಹಿಳೆಯರು ಗ್ರಾಮಕ್ಕೆ ಬಂದ ಸಮಯದಲ್ಲಿ ಆರತಿ ಮಾಡಿ ಸ್ವಾಗತ ಮಾಡಿಕೊಳ್ಳುತ್ತಿರುವ ಚಿತ್ರಣ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ ಇದೇಲ್ಲದರ ನಡುವೆ ಗ್ರಾಮಕ್ಕೆ ತೆರಳಿ ಕುಶಲೋಪರಿ ವಿಚಾರ ಮಾಡಿದ ನಂತರ ಕೆಲವೆಡೆ ಮಕ್ಕಳ ವಿದ್ಯಾಭ್ಯಾಸದ ಕುರಿತಂತೆ ಮಾಜಿ ಸಚಿವರು ಪೋಷಕರಿಂದ ಮಾಹಿ ತಿಯನ್ನು ಪಡೆದುಕೊಂಡರು.

ಈ ನಡುವೆ ತಂಬೂರಿನ ಗೌಳಿ ದಡ್ಡಿ ಯಲ್ಲಿ ವಿಶೇಷ ವಾಗಿ ಇವರನ್ನು ಬರಮಾಡಿಕೊಂಡ ಗೌಳಿ ಸಮುದಾ ಯದ ಜನರು ನಂತರ ಅಲ್ಲಿದ್ದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕುರಿತಂತೆ ಮಾಜಿ ಸಚಿವ ಸಂತೋಷ ಲಾಡ್ ಪೋಷಕರಿಂದ ಮಾಹಿತಿಯನ್ನು ಪಡೆದು ಕೊಂಡು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ದಿಂದ ಅವರನ್ನು ವಂಚಿತರನ್ನಾಗಿ ಮಾಡಬೇಡಿ
ಎಷ್ಚೇ ಖರ್ಚು ಆಗಲಿ ಆದರೂ ಪರವಾಗಿಲ್ಲ ಓದಿಸಿ ಇಲ್ಲವೇ ನಿಮಗೆ ಆಗಲಿಲ್ಲ ಎಂದರೇ ಹೇಳಿ ನಾನು ಓದಿಸುತ್ತೇನೆಂದರು.ಇದರೊಂದಿಗೆ ಪಾಲಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರು.
ನಿಮ್ಮ 25 ಕುಟುಂಬಗಳಲ್ಲಿ ಯಾವುದೇ ಹೆಣ್ಣು ಮಕ್ಕಳು ಇದ್ದರೆ ಹೇಳಿ ನನಗೆ ಹೇಳಿ ನಾನು ಓದಿಸು ತ್ತೇನೆ ಎನ್ನುತ್ತಾ ತಾವೊಬ್ಬ ಸಾಮಾನ್ಯರಲ್ಲಿ ಸಾಮಾ ನ್ಯರು ಅಧಿಕಾರ ಇದ್ದರು ಒಂದೇ ಇಲ್ಲದಿದ್ದರೂ ಒಂದೇ ಎನ್ನುತ್ತಾ ಯಾವಾಗಲೂ ನಿಮ್ಮೊಂದಿಗೆ ನಾವು ಎಂಬ ಮಾತನ್ನು ಹೇಳಿ ರಾಜಕಾರಣಿಗಳಲ್ಲಿ ಕೇವಲ ರಾಜಕಾರಣ ಇದ್ದರಷ್ಟೇ ಸಾಲದು ಸಾಮಾ ಜಿಕ ಕಾಳಜಿ ಬದ್ದತೆ ಇರಬೇಕು ಎಂಬೊದನ್ನು ಇವರು ತೋರಿಸಿಕೊಟ್ಟರು.ಇನ್ನೂಇವರ ಈ ಒಂದು ಮಾತನ್ನು ಕೇಳಿದ ಗೌಳಿ ಸಮುದಾಯದ ಜನರು ನಿಮ್ಮ ಮಾತನ್ನು ನಡೆಸಿಕೊಡುತ್ತೇವೆ ಎನ್ನುತ್ತಾ ತಮ್ಮನಾಯಕನನ್ನು ನಗು ನಗುತ್ತಾ ಹೋಗಿ ಬನ್ನಿ ಧಣಿ ನಿಮ್ಮೊಂದಿಗೆ ನಾವು ಯಾವಾಗಲೂ ಇರುತ್ತೇವೆ ಎಂಬ ಭರವಸೆಯ ಮಾತನ್ನು ಹೇಳಿ ಕಳಿಸಿಕೊಟ್ಟರು