ದಾವಣಗೆರೆ –
ಈ ಸ್ವತ್ತು ಮಾಡಿಕೊಡಲು 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ PDO ರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.ಜಿಲ್ಲೆಯ ದೇವಿಕೆರೆ ಗ್ರಾಪಂ ಪಿಡಿಓ ಬಸವರಾಜಪ್ಪ ಅವರೇ ಟ್ರ್ಯಾಪ್ ಆಗಿದ್ದಾರೆ.
ಇ ಸೊತ್ತು ಮಾಡಿಕೊಡಲು ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯತಿ ಪಿಡಿಓ ಬಸವರಾಜಪ್ಪ.
ದಾವಣಗೆರೆ ನಗರದ ಪಿಬಿ ರಸ್ತೆಯ ಬಳಿ ದ್ವಾರಕಾ ಹೊಟೇಲ್ ನಲ್ಲಿ ಹಣ ಪಡೆಯುವಾಗ ಲೋಕಾ ಯುಕ್ತರ ಬಲಿಗೆ ಬಸವರಾಜಪ್ಪ ಬಲೆಗೆ ಬಿದ್ದಿದ್ದು ದೇವಿಕೆರೆ ಗ್ರಾಮದ ಶಾಂತಕುಮಾರ ಎಂಬುವ ರಿಂದ ಐದು ಸಾವಿರ ರೂಪಾಯಿ ಲಂಚ ಸ್ವೀಕರಿ ಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಂಜನೇಯ ದಾಳಿಯನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..