ಧಾರವಾಡ –
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬರು ಸಾವಿಗೀಡಾಗಿದ್ದಾರೆ. ಮಂಜುನಾಥ ನಾಗಯ್ಯ ಸಾವಿಗೀಡಾದ ಕೈದಿಯಾಗಿದ್ದಾರೆ. ಹೃದಯಾಘಾತ ದಿಂದ ಸಾವಿಗೀಡಾದ್ದಾರೆ ಎನ್ನಲಾಗಿದ್ದು ಮೂಲತಃ ಚಿಕ್ಕಮಗಳೂರಿನವರಾಗಿದ್ದಾರೆ.

ಶಿಕ್ಷಾ ಬಂಧಿ ಕೈದಿಯಾಗಿದ್ದ ಮಂಜುನಾಥ್ ಕಳೆದ ಹಲವು ವರ್ಷಗಳಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇದ್ದನು.ಇಂದು ಏಕಾಏಕಿಯಾಗಿ ಕಾರಾಗೃಹದಲ್ಲಿ ಅನಾರೋಗ್ಯದಿಂದ ಕುಸಿದು ಬಿದ್ದನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು

ಕುಸಿದು ಬಿದ್ದ ಕೂಡಲೇ ಮಂಜುನಾಥ್ ನನ್ನು ಜಿಲ್ಲಾ ಆಸ್ಪತ್ರೆಯಿಂದ ಮತ್ತೆ ಹೆಚ್ಚಿನ ಚಿಕಿತ್ಸೆ ಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.ಆದರೆ ಚಿಕಿತ್ಸೆ ನೀಡುವ ಮುನ್ನವೇ ಕೈದಿ ದಾರಿ ಮಧ್ಯದಲ್ಲಿ ಸಾವಿಗೀಡಾದ್ದಾರೆ.ಇನ್ನೂ ಇತ್ತ ಈ ಒಂದು ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ