ಧಾರವಾಡ –
ಧಾರವಾಡದಲ್ಲಿ ಶಿಕ್ಷಣ ಇಲಾಖೆಯಲ್ಲಿ ಮತ್ತೊಂದು ಹೊಸ ಕಾರ್ಯಕ್ರಮ ಆರಂಭವಾಗಿದೆ. ಶಿಕ್ಷಕರ ಹೊಸ ಪ್ರಯತ್ನದ ಮತ್ತು ಯೋಜನೆಯ ಒಂದು ಕಾರ್ಯಕ್ರಮ ಇದಾಗಿದೆ. ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತನ CEO

ಸಹಕಾರದೊಂದಿಗೆ ಧಾರವಾಡದಲ್ಲಿ ಇಂದಿನಿಂದ ಓದುವ ಬೆಳಕು ಕಾರ್ಯಕ್ರಮವನ್ನು ಆರಂಭ ಮಾಡಿದ್ದಾರೆ.ಧಾರವಾಡದಲ್ಲಿ ಓದುವ ಬೆಳಕು ಕಾರ್ಯಕ್ರಮಕ್ಕೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ ಅವರು ಚಾಲನೆ ನೀಡಿದರು. ನಂತರ ತಮ್ಮ ಮನೆಯಲ್ಲಿದ್ದ ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಶಿಕ್ಷಕರ ಕೈಗೆ ಹಸ್ತಾಂತರಿಸಿದ್ರು. ಇದೇ ವೇಳೆ ಕಾರ್ಯಕ್ರಮದ ಉದ್ದಕ್ಕೂ ಸಾಕಷ್ಟು ಶಿಕ್ಷಣ ಪ್ರೇಮಿಗಳು ಉತ್ಸಾಹಿ ನಿವೃತ್ತ ಶಿಕ್ಷಕರು ಸೇರಿದಂತೆ ಹಲವರು ಶಿಕ್ಷಕರಿಗೆ ಸಾಕಷ್ಟು ಪ್ರಮಾಣದಲ್ಲಿ ಪುಸ್ತಕಗಳನ್ನು ನೀಡಿದ್ರು.

ಒಂದೇ ದಿನ ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಶಿಕ್ಷಕರ ಕೈ ತಲುಪಿದ್ದು ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳನ್ನು ಕೊಡುವುದಾಗಿ ಹೇಳಿದ್ದಾರೆ. ಇನ್ನೂ ವಿಶೇಷವಾದ ಈ ಒಂದು ಕಾರ್ಯಕ್ರಮದಲ್ಲಿ ಧಾರವಾಡ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿ ಎನ್ ಕೀರ್ತಿವತಿ, ಆರ್ ಎಂ ಕುರ್ಲಿ, ಕಮಲಾ ಹೊರಟ್ಟಿ , ಮಕ್ಕಳ ಸಾಹಿತಿ ಶಂಕರ ಹಲಗತ್ತಿ ,ಎಲ್ ಐ ಲಕ್ಕಮ್ಮನವರ,

ಹನಗಾ ಘೋಡಕಿಂಡಿ , ರಾಘವೇಂದ್ರ ಬಡಿಗೇರ ,ಅರುಣ ನವಲೂರು, ಸಿದ್ದು ವಾರದ ,ವಿ ಎನ್ ಮಡಿವಾಳರ, ಎಮ್ ಎಮ್ ಮುಲ್ಲಾನವರ ಸೇರಿದಂತೆ ಹಲವು ಶಿಕ್ಷಕ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.