ಕಲಬುರಗಿ –
ಶಿಕ್ಷಣ ಇಲಾಖೆಯು ಎರಡು ವರ್ಷಗಳ ಬಳಿಕ 6 ರಿಂದ 8ನೇ ತರಗತಿಗಳಿಗೆ ಬೋಧಿಸಲು 15 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಏನೋ ಆಹ್ವಾನಿಸಿದೆ.ಆದರೆ ಇಂಗ್ಲಿಷ್ ಬೋಧಿಸಲು ಅತ್ಯಂತ ಕಡಿಮೆ ಸಂಖ್ಯೆಯ ಶಿಕ್ಷಕರ ನೇಮಕಕ್ಕೆ ಮುಂದಾಗಿರುವುದು ಉದ್ಯೋಗಾಕಾಂಕ್ಷಿ ಗಳಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ.ಹೀಗಾಗಿ 15 ಸಾವಿರ ಶಿಕ್ಷಕ ಹುದ್ದೆಗಳ ಪೈಕಿ ರಾಜ್ಯದಾದ್ಯಂತ 1500 ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಅದರಲ್ಲೂ ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಕೇವಲ 212 ಇಂಗ್ಲೀಷ್ ಶಿಕ್ಷಕರ ಹುದ್ದೆ ಭರ್ತಿಗೆ ಮುಂದಾಗಿದೆ.ಹೀಗಾಗಿ 2018-19 ರಲ್ಲಿ ನೇಮಕಾತಿಯಾದ ಬಳಿಕವೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 1,414 ಇಂಗ್ಲಿಷ್ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದವು. ಅದರಲ್ಲಿ ಈ ಬಾರಿ ಕೇವಲ 212 ಹುದ್ದೆಗಳಿಗೆ ಮಾತ್ರ ನೇಮಕಾತಿಗೆ ಅಧಿಸೂ ಚನೆ ಹೊರಡಿಸಲಾಗಿದೆ.
ಉಳಿದ ವಿಷಯಗಳಿಗೆ ಜಿಲ್ಲಾವಾರು ಸರಾಸರಿ 200ರಿಂದ 300 ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ.ಇಂಗ್ಲಿಷ್ ಶಿಕ್ಷಕರನ್ನು ಕಡಿಮೆ ಸಂಖ್ಯೆಯಲ್ಲಿ ಭರ್ತಿ ಮಾಡಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸುತ್ತಾರೆ ಶಿಕ್ಷಕ ಹುದ್ದೆಗೆ ಅರ್ಜಿ ಹಾಕಲು ತಯಾರಿ ನಡೆಸಿರುವ ಕಲಬುರಗಿಯ ಉಮೇಶ್, ಚಿನ್ನಸ್ವಾಮಿ, ಬೀದರ್‌ನ ಶ್ರೀಕಾಂತ.ಎರಡು ವರ್ಷಗಳಿಂದ ನಾವು ತಯಾರಿ ಮಾಡಿಕೊಂಡಿದ್ದೇವೆ.ಎಷ್ಟೋ ಜನರು ಅತಿಥಿ ಶಿಕ್ಷಕ ಹುದ್ದೆಯನ್ನೂ ತೊರೆದು ಬಂದಿದ್ದಾರೆ.ಈಗ ನೋಡಿದರೆ ಪ್ರತಿ ಜಿಲ್ಲೆಗೆ 30, 40 ಇಂಗ್ಲಿಷ್ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರೆ ನಮ್ಮ ಗತಿ ಏನು ಹಾಗೇ ಮುಂದಿನ ನೇಮಕ ಪ್ರಕ್ರಿಯೆ ಆರಂಭವಾಗುವಷ್ಟರಲ್ಲಿ ಎಷ್ಟೋ ಅಭ್ಯರ್ಥಿಗಳ ಅರ್ಹತಾ ವಯಸ್ಸು ಮುಗಿದಿರು ತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕೆಂದು ರಾಯ ಚೂರಿನ ರಮೇಶ ಹೆಗ್ಗಡೆ,ಬೀದರ್‌ನ ಪ್ರೇಮನಾಥ,ಪವಿತ್ರಾ ಮಾದರ ಒತ್ತಾಯಿಸಿದರು.