ಯಾದಗಿರಿ –
ಮಹಾರಾಷ್ಟ್ರದಲ್ಲಿ ನಿರಂತರವಾದ ಮಳೆಯ ಹಿನ್ನಲೆಯಲ್ಲಿ ಬಸವಸಾಗರ ಜಲಾಶಯಕ್ಕೆ ಜೀವಕಳೆ ಬಂದಿದೆ ಹೌದು ಡೆಡ್ ಸ್ಟೋರೇಜ್ ಹೋಗಿದ್ದ ಡ್ಯಾಂ ಈಗ ಸಂಪೂರ್ಣವಾಗಿ ಭರ್ತಿ ಯಾಗಿದೆ.
ಆಲಮಟ್ಟಿ ಡ್ಯಾಂನಿಂದ ಬಸವಸಾಗರ ಡ್ಯಾಂಗೆ 1,30,000 ಕ್ಯೂಸೆಕ್ ನಷ್ಟು ನೀರನ್ನು ಬಿಡುಗಡೆ ಮಾಡಲಾಗಿದೆ.ಬಸವಸಾಗರ ಡ್ಯಾಂ ಗೆ ಒಳ ಹರಿವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಒಂದು ನೀರನ್ನು ಬಿಡುಗಡೆ ಮಾಡಲಾಗಿದೆ.
ಬಸವಸಾಗರ ಡ್ಯಾಂ ನಿಂದ ಕೃಷ್ಣ ನದಿಗೆ 20,000 ಕ್ಯೂಸೆಕ್ ನಷ್ಟು ನೀರನ್ನು ಬಿಡುಗಡೆ ಮಾಡಲಾ ಗಿದೆ.ಡ್ಯಾಂನಿಂದ ನದಿಗೆ 75 ಸಾವಿರ ಕ್ಯೂಸೆಕ್ ನಷ್ಟು ಬಿಡುಗಡೆಯಾಗಿದೆ.
ಇನ್ನೂ ನದಿ ಪಾತ್ರದ ಜನರಿಗೆ ಎಚ್ಚರದಿಂದ ಇರಲು ಡ್ಯಾಂ ಮುಖ್ಯ ಇಂಜಿನಿಯರ್ ಮಂಜುನಾಥ ಸೂಚನೆಯನ್ನು ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಇದಾಗಿದೆ.
ಸುದ್ದಿ ಸಂತೆ ನ್ಯೂಸ್ ಯಾದಗಿರಿ…..