ರಾಯಚೂರು –
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ನಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಕಂಡು ಬಂದ ಘಟನೆ ರಾಯಚೂರಿನಲ್ಲಿ ನಡೆದಿದೆ.ಶಾಲಾ ಆವರಣದಲ್ಲಿ ನ ನೀರಿನ ಟ್ಯಾಂಕ್ ನಲ್ಲಿ ಈ ಒಂದು ಹಾವು ಕಂಡ ಕೂಡಲೇ ಭಯಭೀತರಾಗಿದ್ದಾರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಬುದ್ದಿನ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ನಲ್ಲಿದ್ದ ನಾಗರಹಾವು ಕಂಡು ಬಂದಿದೆ.ನೀರಿನ ಟ್ಯಾಂಕ್ ನಲ್ಲಿದ್ದ ನಾಗರಹಾವು ರಕ್ಷಿಸಿದ ಊರಗತಜ್ಞ ಶಾಂತಯ್ಯಸ್ವಾಮಿ ನೀರಿನ ಟ್ಯಾಂಕ್ನ ಲ್ಲಿದ್ದ ನಾಗರ ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ ಊರಗತಜ್ಞರು.
ಇನ್ನೂ ಈ ಒಂದು ನಾಗರಹಾವು ರಕ್ಷಣೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಾಗರಹಾವು ರಕ್ಷಣೆಯಿಂದ ನಿಟ್ಟುಸಿರು ಬಿಟ್ಟ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು