ಸೂಲಿಬೆಲೆ –
ವಿದ್ಯಾರ್ಥಿಯೊಬ್ಬರಿಗೆ ಥಳಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿ ರುವ ಘಟನೆ ಸೂಲಿಬೆಲೆ ಹೋಬಳಿಯ ಚಿಕ್ಕ ಕೋಲಿಗ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಹಿನ್ನೆಲೆಯಲ್ಲಿ ಶಿಕ್ಷಕ ಈಶ್ವರಪ್ಪ ಪೂಜಾರಿ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸ ಲಾಗಿದೆ.
ಶಿಕ್ಷಕ ಈಶ್ವರಪ್ಪ ಪೂಜಾರಿ ಅವರನ್ನು ಶಾಲೆಗೆ ನಿಯೋಜಿಸಬೇಕು ಎಂದು ಕೆಲವು ಪೋಷಕರು ಆಗ್ರಹಿಸಿದ್ದು ಅಲ್ಲದೇ ಪ್ರತಿಭಟನೆಯನ್ನು ಮಾಡಿದ್ದು ಕಂಡು ಬಂದಿತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕ್ಷೇತ್ರ ಶಿಕ್ಷಣಾ ಧಿಕಾರಿ ವಿವೇಕಾನಂದ ಮಕ್ಕಳನ್ನು ಹೊಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಶಾಲೆ ಮಕ್ಕಳು ಶಿಕ್ಷಕ ಈಶ್ವರಪ್ಪ ಪೂಜಾರಿ ಅವರ ವಿರುದ್ಧದ ಅಮಾನತು ಆದೇಶ ಹಿಂಪಡೆಯಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದರು.























