ಬೆಂಗಳೂರು –
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ರನ್ನು ವಿವಿಧ ಕೆಲಸಗಳ ನಿಮಿತ್ತ ಅನ್ಯಕಾರ್ಯಗಳಿಗೆ ನಿಯೋಜಿಸಲಾಗಿತ್ತು.ಇದೀಗ ಈ ನಿಯೋಜನೆಗೊಂಡು ಅನ್ಯಕಾರ್ಯವನ್ನು ಮಾಡುತ್ತಿರುವ ಆದೇಶವನ್ನು ಸಧ್ಯ ರದ್ದುಗೊಳಿಸಲಾಗಿದೆ.
ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿ ಸಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಹಾಗೇ ನಿಯೋಜನೆ ಮೇಲೆ ಅನ್ಯಕಾರ್ಯ ನಿಮಿತ್ತ ಕರ್ತವ್ಯ ನಿರ್ವಹಿಸುತ್ತಿರುವ ಸಹ ಪ್ರಾಧ್ಯಾಪಕರು,ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರ ನಿಯೋಜನೆ ರದ್ದುಪಡಿಸಿದೆ. ಇನ್ನೂ ಹೀಗೆ ಅನ್ಯಕಾರ್ಯಗಳ ಮೇಲೆ ನಿಯೋಜನೆ ಗೊಂಡಿದ್ದಂತ ಪ್ರಾಧ್ಯಾಪಕರು,ಮಾತೃ ಕಾಲೇಜುಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಸದರಿ ನಿಯೋಜನೆ ರದ್ದು ಪಡಿಸಿ ನಿಯೋಜನೆಯಲ್ಲಿರುವವರು ಮೇ.4ರ ನಾಳೆಯೊಳಗಾಗಿ ಮಾತೃ ಕಾಲೇಜುಗಳಿಗೆ ಹಿಂದಿ ರುಗಿಸುವಂತೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.