ಧಾರವಾಡ –

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾರ್ಷಿಕ ಸದಸ್ಯತ್ವದ ವಂತಿಗೆ ಎಷ್ಟಿದೆ ಗೊತ್ತಾ ಕೇವಲ ಹತ್ತು ರೂಪಾಯಿಗಳು, ಹೌದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಗಮವಾಗಿದ್ದೆ ಶಿಕ್ಷಕರ ಉಚಿತ ಸೇವೆಗೆ ಆದ್ದರಿಂದ ವಾರ್ಷಿಕ ಸದಸ್ಯತ್ವ ಹಣ ಕೇವಲ ಹತ್ತು ರೂಪಾಯಿಗಳು ಮಾತ್ರ ಈ ಕುರಿತು ಸುದ್ದಿ ಸಂತೆಗೆ ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಮತ್ತು ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಕೋಶಾದ್ಯಕ್ಷರು ಎಸ್ ಎಫ್ ಪಾಟೀಲ ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ ಅವರನ್ನು ಮಾತನಾಡಿಸಿದಾಗ ಅವರು ಈ ಕೆಳಗಿನಂತೆ ಹೇಳಿ ದರು ಈಗಾಗಲೇ ನಮ್ಮ ಶಿಕ್ಷಕರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪ್ರತಿವರ್ಷ ಎರಡು ನೂರು, ಹಾಗೆಯೇ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಎರಡು ನೂರು ರೂಪಾಯಿ ಗಳನ್ನು ಪ್ರತಿವರ್ಷ ಸದಸ್ಯತ್ವದ ವಂತಿಗೆ ನೀಡುತ್ತಿ ದ್ದು, ನಮ್ಮದು ಹೊಸ ಸಂಘ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಾವೂ ಸಹ ಎರಡು ನೂರು ಪಡೆದರೆ ಶಿಕ್ಷಕರಿಗೆ ಆರ್ಥಿಕ ಹೊರೆ ಆಗಲಿದೆ ಅಂತ ಗಮನಿಸಿ, ನಾವು ಪ್ರತಿವರ್ಷ ಕೇವಲ ವಾರ್ಷಿಕ ಸದಸ್ಯತ್ವ ಹತ್ತು ರೂಪಾಯಿ ಪಡೆಯುತ್ತಿದ್ದೇವೆ ಸಭೆ ಸಮಾರಂಭದ ಇತ್ಯಾದಿ ಸಂಘದ ಚಟುವಟಿಕೆಗ ಳನ್ನು ಬಿಡುವಿನ ವೇಳೆಯಲ್ಲಿ ಕಡಿಮೆ ಖರ್ಚಿನಲ್ಲಿ, ಮತ್ತು ನಮ್ಮ ಸಂಘದ ಪದಾಧಿಕಾರಿಗಳು ಸ್ವತಃ ಖರ್ಚು ಮಾಡಿ ಸಂಘಟನೆಯನ್ನು ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದರು.

ಇದು ಗ್ರಾಮೀಣ ಶಿಕ್ಷಕರ ನೋವು ನಲಿವಿಗಾಗಿ ಹುಟ್ಟಿಕೊಂಡ ಸಂಘ ವಾಗಿದ್ದು ಹಣ ಅಧಿಕಾರ ಗಳಿಸಲು ಉದಯವಾದ ಸಂಘವಲ್ಲ ಎಂದು ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಖನ್ನಿನಾಯ್ಕರ, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಆರ್ ನಾರಾಯಣಸ್ವಾಮಿ ಚಿಂತಾಮಣಿ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಡಾ, ಲಕ್ಷ್ಮಣ ಕೆ ಎಂ, ಧಾರವಾಡ ಜಿಲ್ಲಾ ಅದ್ಯಕ್ಷ ಅಕ್ಬರಲಿ ಸೋಲಾ ಪುರ, ಮುಂತಾದವರು ಇದೇ ಸಂದರ್ಭದಲ್ಲಿ ಸುದ್ದಿ ಸಂತೆ ಮಾತನಾಡಿಸಿದಾಗ ತಮ್ಮ ಅಭಿಪ್ರಾಯ ಹಂಚಿ ಕೊಂಡರು.