ಧಾರವಾಡ –
ನಿನ್ನೇಯಷ್ಟೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದಲ್ಲಿ ಕಾಣಿಸಿಕೊಂಡಿದ್ದ ಆನೆ ರಾತ್ರೊರಾತ್ರಿ ಅಲ್ಲಿಂದ ತಡಸಿನಕೊಪ್ಪ ಕಾಡಿಗೆ ಶಿಪ್ಟ್ ಆಗಿದೆ.ನಿನ್ನೇ ಬೆಳಿಗ್ಗೆ ಕೆಯುಡಿ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡಿದ್ದ ಗಜರಾಜ ರಾತ್ರಿಯಾಗುತ್ತಿದ್ದಂತೆ ನಾಪತ್ತೆಯಾಗಿ ಬೆಳ ಗಾಗುತ್ತಲೆ ತಡಸಿನಕೊಪ್ಪದಲ್ಲಿ ಪತ್ತೆಯಾಗಿದೆ.
ಈವರೆಗೆ ಯಾವುದೇ ರೀತಿಯಲ್ಲೂ ಯಾವುದೇ ಹಾನಿಯನ್ನು ಮಾಡದೇ ಅಲ್ಲಿಂದ ಇಲ್ಲಿಂದ ಓಡಾಡು ತ್ತಿದ್ದು ಇನ್ನೂ ಇಂದು ಮತ್ತೆ ತಡಸಿನಕೊಪ್ಪದ ಬಳಿ ಕಾಣಿಸಿಕೊಳ್ಳುತ್ತದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಮೊಕ್ಕಾಂ ಹೂಡಿದ್ದಾರೆ.
ಸಧ್ಯ ಸ್ಥಳದಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗ ಳಾದ ಎಸಿಎಫ್ ಸಂತೋಷಕುಮಾರ ಕೆಂಚಪ್ಪವರ, ಸಿಸಿಎಫ್ ಮಂಜುನಾಥ ಚೌಹಾನ್. ಯಶಪಾಲ ಕ್ಷೀರಸಾಗರ,ಆರ್ ಎಸ್ ಉಪ್ಪಾರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿ ಗಳು ತಡಸಿನಕೊಪ್ಪ ದಲ್ಲಿ ಮೊಕ್ಕಾಂ ಹೂಡಿದ್ದಾರೆ
ಪಟಾಕ್ಷಿ ಹಾರಿಸುತ್ತಾ ಸ್ಥಳದಿಂದ ಕಳಿಸುವ ಪ್ರಯತ್ನ ವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿ ದ್ದಾರೆ. ಇನ್ನೂ ಒಂದೇ ಒಂದು ಆನೆ ಓಡಾಡುತ್ತಿದ್ದು ಇದರಿಂದ ಒಂದು ಕಡೆ ಸಾರ್ವಜನಿಕರು ಭಯ ಗೊಂಡಿದ್ದಾರೆ
ಇನ್ನೂ ಇತ್ತ ಮತ್ತೊಂದೆಡೆ ನಿನ್ನೇಯಿಂದ ಧಾರವಾಡ ದಲ್ಲಿ ಬಿಡು ಬಿಟ್ಟಿರುವ ಈ ಒಂದು ಗಜ ರಾಜನಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಕೂಡಾ ದೊಡ್ಡ ತಲೆ ನೋವಾಗಿದ್ದು
ಸುರಕ್ಷಿತವಾಗಿ ಕಾಡಿಗೆ ಕಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಿನ್ನೇ ಯಿಂದ ಬಿಡುವಿಲ್ಲದೇ ಅರ ಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಯನ್ನು ಮಾಡುತ್ತಿದ್ದಾರೆ