This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಏರುತ್ತಲೆ ಇದೆ ಇಂಧನ ಬೆಲೆ ಹಬ್ಬದ ದಿನವೂ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ – ಪೆಟ್ರೋಲ್ ಡಿಸೇಲ್ ನಲ್ಲಿ ಇಂದು ಕೂಡಾ ಬೆಲೆ ಏರಿಕೆ…..

WhatsApp Group Join Now
Telegram Group Join Now

ನವದೆಹಲಿ –

ಕಳೆದ ಹಲವಾರು ದಿನಗಳಿಂದ ಏರುತ್ತಲೆ ಇರುವ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಇಂದು ಕೂಡಾ ಏರಿಕೆಯಾಗಿದ್ದು ಯುಗಾದಿ ದಿನವೂ ದೇಶದ ಜನತೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.ಹೌದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು ನಿನ್ನೆ ಬಿಡುವಿನ ನಂತರ ಇಂದು ಮತ್ತೆ ದರವನ್ನು ಪರಿಷ್ಕರಣೆ ಮಾಡಲಾಗಿದ್ದು ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 80 ಪೈಸೆ ಏರಿಕೆ ಮಾಡಲಾಗಿದ್ದು 102.61 ರೂ.ಗೆ ತಲುಪಿದೆ.

ಡೀಸೆಲ್ ದರ ಕೂಡ 80 ಪೈಸೆ ಏರಿಕೆಯಾಗಿದ್ದು 93.87 ರೂ.ಗೆ ತಲುಪಿದೆ.ಇನ್ನೂ ಕೊಲ್ಕತ್ತಾದಲ್ಲಿ ಪೆಟ್ರೋಲ್ 84 ಪೈಸೆ ಹೆಚ್ಚಾದರೆ ಡೀಸೆಲ್ 80 ಪೈಸೆ ಹೆಚ್ಚಳವಾಗಿದ್ದು ಕ್ರಮವಾಗಿ 112.19 ರೂ., 97.02 ರೂ.ಗೆ ತಲುಪಿದೆ.
ತೆರಿಗೆ ಮತ್ತು ಸಾಗಣೆ ವೆಚ್ಚ ಸೇರಿ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ವ್ಯತ್ಯಾಸವಾಗುತ್ತದೆ.12 ದಿನಗ ಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸುಮಾರು 7.50 ರೂ.ನಷ್ಟು ಹೆಚ್ಚಳವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬ ಹುದು ಇದರಿಂದಾಗಿ ದೇಶದ ಸಾರ್ವಜನಿಕರು ಅದರಲ್ಲೂ ವಾಹನಗಳ ಬಳಕೆ ಮಾಡುವವರು ಪರದಾಡುವಂತಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk