ಬೆಂಗಳೂರು –
ಇದುವರೆಗೆ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದ ಅನೇಕ ಕಾರ್ಯಗಳು ಕಡತ ಗಳ ರೂಪದಲ್ಲಿ ನಡೆಯುತ್ತಿದ್ದವು.ಆದ್ರೇ ಇದಕ್ಕೆ ಸರ್ಕಾರ ಬ್ರೇಕ್ ಹಾಕಿದೆ.ಇನ್ಮೆಂದ ಸಾಮೂಹಿಕ ವಿಮಾ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ,ನಾಮನಿರ್ದೇಶನ ಹಾಗೂ ಅಂತಿಮ ಕ್ಲೇಮುಗಳನ್ನು ಆನ್ ಲೈನ್ ಮೂಲಕ ಸ್ವೀಕರಿ ಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.ಈ ಬಗ್ಗೆ ರಾಜ್ಯ ಸರ್ಕಾರ ನಡವಳಿ ಹೊರಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ಯೋಜನೆ 1981ಗೆ ಸಂಬಂಧಿಸಿದ ಸ್ವೀಕೃತಿ ನಾಮನಿರ್ದೇ ಶನ ಹಾಗೂ ಅಂತಿಮ ಕ್ಲೇಮು ಪ್ರಕರಣಗಳನ್ನು ಕೆಜಿಐಡಿ ಪೋರ್ಟಲ್ https://kgidonline.karnataka.gov.in ರಲ್ಲಿ ಆನ್ ಲೈನ್ ಸೌಲಭ್ಯ ಕಲ್ಪಿಸಲಾಗಿದೆ.ಈ ಪೋರ್ಟಲ್ ಮುಖಾಂತ ರವೇ ಇನ್ಮುಂದೆ ಕಡ್ಡಾಯವಾಗಿ ನಿರ್ವಹಿಸುವುದು ಎಂದು ತಿಳಿಸಿದೆ.
ಇನ್ನೂ ಮುಂದೆ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಸೌಲಭ್ಯದ ಸ್ವೀಕೃತಿ ನಾಮನಿರ್ದೇಶನ ಹಾಗೂ ಅಂತಿಮ ಕ್ಲೇಮುಗಳನ್ನು ಆಫ್ ಲೈನ್ ಮೂಲಕ ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದೆ.