ಬೆಂಗಳೂರು –
ರಾಜ್ಯದ ಪಿಂಚಣಿದಾರರು,ಕುಟುಂಬ ಪಿಂಚಣಿದಾರರು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಬ್ಯಾಂಕುಗಳ ಮೂಲಕ ನಿವೃತ್ತಿ ವೇತನ ಸಂದಾಯ ಮಾಡುವ ಪದ್ಧತಿಯನ್ನು ಜಾರಿಗೆ ತರಲಾಗಿದ್ದು ಆದೇಶದ ಕಂಡಿಕೆ 14.1, 14.2 ಮತ್ತು 14.3 ರಲ್ಲಿ ಸಾರ್ವ ಜನಿಕ ಬ್ಯಾಂಕುಗಳಲ್ಲಿ ನಿವೃತ್ತಿ ವೇತನ,ಕುಟುಂಬ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರ ಪಿಂಚಣಿಯನ್ನು ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ಜೀವಂತ ಪ್ರಮಾಣ ಪತ್ರ, ಉದ್ಯೋಗವಿಲ್ಲದಿರುವ,ಮರು ಉದ್ಯೋಗ ಹೊಂದಿರುವ ಪ್ರಮಾಣ ಪತ್ರ ಹಾಗೂ ಮರು ವಿವಾಹವಾಗಿರುವ,ಮರು ವಿವಾಹವಾಗದಿರುವ ಪ್ರಮಾಣ ಪತ್ರಗಳನ್ನು ಪಿಂಚಣಿ ಪಡೆಯುತ್ತಿರುವ ಬ್ಯಾಂಕುಗಳಿಗೆ ಸಲ್ಲಿಸಬೇಕೆಂದು ಆದೇಶ ದಲ್ಲಿ ತಿಳಿಸಿದೆ.