This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Local News

ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಗಿ ಅಧಿಕಾರ ವಹಿಸಿಕೊಂಡ ಸಂಜೀವ ಬಿಂಗೀರಿ – ಜಿಲ್ಲೆಯ ಶಿಕ್ಷಕರು ಅಧಿಕಾರಿಗಳಿಂದ ಸ್ವಾಗತ ಅಭಿನಂದನೆ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡದ ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ನೂತನ ಉಪನಿರ್ದೇಶಕ ರಾಗಿ ಹಿರಿಯ ಕೆ.ಇ.ಎಸ್. ಅಧಿಕಾರಿ ಸಂಜೀವ ಬಸಪ್ಪ ಬಿಂಗೇರಿ ಬುಧವಾರ ಇಂದು ಅಧಿಕಾರ ಸ್ವೀಕರಿಸಿದರು. 1994ರಲ್ಲಿ ಕೆ.ಇ.ಎಸ್. ತೇರ್ಗಡೆಯಾಗಿ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಾ ಧ್ಯಾಪಕರಾಗಿ ಸರಕಾರಿ ಸೇವೆ ಆರಂಭಿಸಿದರು.

ರೋಣ ತಾಲೂಕು ಸಹಾಯಕ ಶಿಕ್ಷಣಾಧಿಕಾರಿಯಾಗಿ ಮತ್ತು ಜಿಲ್ಲಾ ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.ಕ್ಲಾಸ್-1 ಕಿರಿಯ ಶ್ರೇಣಿ ಹುದ್ದೆಗೆ ಬಡ್ತಿ ಹೊಂದಿ ಧಾರವಾಡ ಡಯಟ್ ಹಿರಿಯ ಉಪನ್ಯಾಸಕರಾಗಿ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಯಾಗಿ ಗ್ರಾಮೀಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ,ಸರ್ವ ಶಿಕ್ಷಣ ಅಭಿಯಾನದ ಬೆಳಗಾವಿ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಯಾಗಿ,ಮತ್ತೆ ಧಾರವಾಡ ಡಯಟ್ ಹಿರಿಯ ಉಪನ್ಯಾಸಕರಾಗಿ ಮತ್ತು ವಿಜಯಪೂರ ಜಿಲ್ಲೆ ಇಂಡಿ ತಾಲೂಕು ಬಿ.ಇ.ಓ.ಹುದ್ದೆಗಳಲ್ಲಿ ಸೇವೆಸಲ್ಲಿಸಿದ್ದಾರೆ

ನಿಕಟಪೂರ್ವದಲ್ಲಿ ನಗರದ ಪ್ರತಿಷ್ಠಿತ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆ(ಹೆಟ್ರೇಕಾ)ಪ್ರಾಚಾರ್ಯರ ಹುದ್ದೆಯಲ್ಲಿ ದ್ದರು. ಪ್ರಸ್ತುತ ಡಿಡಿಪಿಐ ಹುದ್ದೆಗೆ ಬಡ್ತಿ ಹೊಂದಿದ್ದು, ಬೆಳಗಾವಿ,ಉತ್ತರಕನ್ನಡ,ಧಾರವಾಡ, ಹಾವೇರಿ, ಗದಗ, ವಿಜಯಪೂರ,ಬಾಗಲಕೋಟ,ಶಿರಸಿ ಮತ್ತು ಚಿಕ್ಕೋಡಿ 9 ಜಿಲ್ಲೆಗಳ ಆಡಳಿತ ವ್ಯಾಪ್ತಿಯ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯಲ್ಲಿಯ ಡಿ.ಡಿ.ಪಿ.ಐ.ಹುದ್ದೆಯ ಮೂಲಕ ಆಡಳಿತ ನಿರ್ವಹಣೆ ಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಬಿಇಓ ಮತ್ತು ಇತರೇ ಇಲಾಖಾ ಅಧಿಕಾರಿಗಳು,ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾ ರಿಗಳು ಸಂಜೀವ ಬಿಂಗೇರಿ ಅವರನ್ನು ಅಭಿನಂದಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk