ಹುಬ್ಬಳ್ಳಿ –
ನಾನು ಪರಿಷತ್ ಸಭಾಪತಿ ಆಗುವುದಕ್ಕೆ ಮೂರು ಪಕ್ಷದಿಂದ ಸಹಮತವಿದೆ ಹೀಗಾಗಿ ಬಹುತೇಕವಾಗಿ ನಾನು ಅವಿರೋಧವಾಗಿ ಆಯ್ಕೆಯನ್ನು ಮೂರು ಪಕ್ಷದವರು ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಬಿಜೆಪಿ ಮೈತ್ರಿ, ವಿಲೀನ ಯಾವುದೇ ಇಲ್ಲ ಜೆಡಿಎಸ್ ಬಿಜೆಪಿ ಮೈತ್ರಿ ಅನ್ನೋದು ಕೇವಲ ಗಾಳಿಸುದ್ದಿ ಅಷ್ಟೇ ಎಂದರು. ಇನ್ನೂ ಪರಿಷತ್ ಸಭಾಪತಿ ಆಯ್ಕೆಯನ್ನು ಜೆಡಿಎಸ್ ನವರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ ಬಸವರಾಜ್ ಹೊರಟ್ಟಿಯವರು ಪರಿಷತ್ ಸಭಾಪತಿ ಆಗುವುದಕ್ಕೆ ಮೂರು ಪಕ್ಷದಿಂದ ಸಹಮತವಿದೆ ನಾನು ಹಿರಿಯ ಸದಸ್ಯ ಎನ್ನುವ ಕಾರಣಕ್ಕೆ ಅವಿರೋದ ಆಯ್ಕೆಗೆ ಮೂರು ಪಕ್ಷದವರು ಸಹಮತ ವ್ಯಕ್ತಪಡಿಸಿದ್ದಾರೆ .

ಜೆಡಿಎಸ್ ವರಿಷ್ಠ ದೇವೆಗೌಡರು ನನ್ನನ್ನ ಸಭಾಪತಿ ಮಾಡುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನುವುದನ್ನ ಕೇಳಿದ್ದೇನೆ ಪರಿಷತ್ ಸಭಾಪತಿಯನ್ನ ಕೆಳಗಿಳಿಸುವಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ಆಗಿತ್ತು ನಾನು ಸಭಾಪತಿಯಾಗುವುದಕ್ಕೆ ಶೇ 90 ರಷ್ಡು ಸದಸ್ಯರ ಸಹಮತವಿದೆ ಇದು ನನ್ನದು ಕೊನೆಯ ಅವಧಿ ಅಲ್ಲ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದರು.