ಬೆಳಗಾವಿ –
ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಬರುವುಕ್ಕೂ ಮುನ್ನವೇ ಮತ್ತೊರ್ವ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನ್ಯಾಯವಾದಿ ಸಿ. ಬಿ. ಅಂಬೋಜಿ ( 64) ಸಾವನ್ನಪ್ಪಿದ ಅಭ್ಯರ್ಥಿಯಾಗಿದ್ದಾರೆ. ಕಳೆದ ಡಿಸೆಂಬರ್ 22 ರಂದು ಮಂಗಳವಾರ ನಡೆದಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಇವರು ಅಭ್ಯರ್ಥಿಯಾಗಿದ್ದಾರೆ. ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತಿ ಚುನಾವಣೆಗೆ ವಾರ್ಡ್ ನಂಬರ್ 2 ರಿಂದ ಸ್ಪರ್ಧೆ ಮಾಡಿದ್ದರು.

ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದು ಗ್ರಾಮ ಪಂಚಾಯತ ನಲ್ಲಿ ಏನಾದರೂ ಅಭಿವೃದ್ದಿ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ವಕೀಲ ಸಿ ಸಿ ಅಂಬೋಜಿ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಶಿಪ್ಟ್ ಮಾಡಲಾಯಿತು.

ಆದರೂ ದಾರಿ ಮಧ್ಯದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನೂ ಮುಖ್ಯವಾಗಿ ಫಲಿತಾಂಶ ಬರುವುದಕ್ಕೂ ಮುನ್ನ ಅಭ್ಯರ್ಥಿಯನ್ನು ಕಳೆದುಕೊಂಡ ಗ್ರಾಮದಲ್ಲಿ ನೀರವ ಮೌನ ಕಂಡು ಬರುತ್ತಿದೆ. ಈವರೆಗೆ ಎಲ್ಲವನ್ನೂ ಮಾಡಿ ಈಗ ಫಲಿತಾಂಶಕ್ಕಾಗಿ ದಾರಿ ಕಾಯುತ್ತಿದ್ದ ಅಂಬೋಜಿ ನಿಧನದಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.