This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

ನಾಳೆಯಿಂದ ಶಿಕ್ಷಕರ ವರ್ಗಾವಣೆ ಆರಂಭ – ಯಾವ ಯಾವ ದಿನ ಯಾರು ಯಾರ ವರ್ಗಾವಣೆ ಕಂಪ್ಲೀಟ್ ಮಾಹಿತಿ…..

WhatsApp Group Join Now
Telegram Group Join Now

ಬೆಂಗಳೂರು –

ನಾಳೆಯಿಂದ ರಾಜ್ಯಾದ್ಯಂತ ಮತ್ತೊಂದು ಹಂತದಲ್ಲಿ ಶಿಕ್ಷಕರ ವರ್ಗಾವಣೆ ನಡೆಯಲಿದ್ದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಈ ಒಂದು ಪ್ರಕ್ರಿಯೆ ನಡೆಯಲಿದ್ದು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲಾ ವ್ಯವಸ್ಥೆ ಗಳನ್ನು ಮಾಡಿಕೊಂಡಿದ್ದು ವಿಭಾಗದ ಗ್ರೂಪ್-‘ಬಿ’ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ,ತತ್ಸಮಾನ ವೃಂದ ದವರು ಪ್ರಥಮ ಅಧಿಸೂಚನೆಯನ್ವಯ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಗ್ರೂಪ್-‘ಬಿ’ ವೃಂದದ ಅಧಿಕಾರಿಗಳ ವರ್ಗಾವಣೆ ಕೌನ್ಸೆಲಿಂಗ್ ಇದೇ 16, 17ರಂದು ನಡೆಯ ಲಿದೆ.ವಿಭಾಗದೊಳಗಿನ ಕೋರಿಕೆ ವರ್ಗಾವಣೆಗಳ ಮತ್ತು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕನಿಷ್ಠ ಸೇವೆ (3 ವರ್ಷ ಮೇಲ್ಪಟ್ಟು ಮತ್ತು 5 ವರ್ಷ ಒಳಗೆ) ಇರುವ ಅಧಿಕಾರಿ ಗಳಿಗೆ ಅನುಕ್ರಮವಾಗಿ 16, 17ರಂದು ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ

ಸಂಬಂಧಿಸಿದ ಅಧಿಕಾರಿಗಳು ಆಯುಕ್ತರ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು.

ಇನ್ನೂ ಗ್ರೂಪ್-ಬಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ, ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಆದ್ಯತಾ ಪಟ್ಟಿಯನ್ನು ರಾಜ್ಯದ ಇಲಾಖೆಯ ವೆಬ್‌ಸೈಟ್ ನಲ್ಲಿ ‍ಪ್ರಕಟಿಸಲಾಗಿದೆ

ಸ್ಥಳ ಆಯ್ಕೆಗೆ ದಿನಾಂಕ ನಿಗದಿ ವಿಭಾಗದ ಘಟಕದೊಳಗಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು,ದೈಹಿಕ ಶಿಕ್ಷಣ ಶಿಕ್ಷಕರು- ಗ್ರೇಡ್-2/ ವಿಶೇಷ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು/ ವಿಶೇಷ ಶಿಕ್ಷಕ ವೃಂದದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಸಂಬಂಧ ಅಂತಿಮ ಆದ್ಯತಾ ವರ್ಗಾವಣೆ ಪಟ್ಟಿಯಲ್ಲಿರುವವರಿಗೆ ಸ್ಥಳ ಆಯ್ಕೆ ಪ್ರಕ್ರಿಯೆಯುಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ.

ಡಿ. 16: ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್-2 ಪರಸ್ಪರ ವರ್ಗಾವಣೆ.

ಡಿ. 21: ಪರಸ್ಪರ ವರ್ಗಾವಣೆ ಪ್ರೌಢ ಶಾಲಾ ವಿಭಾಗ ಸಹ ಶಿಕ್ಷಕರು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹಾಗೂ ವಿಶೇಷ ಶಿಕ್ಷಕರು

ಕೋರಿಕೆ ವರ್ಗಾವಣೆ: ಡಿ.20ಕ್ಕೆ ಸಹಶಿಕ್ಷಕರು,ಸಹ ಶಿಕ್ಷಕರು ಡಿ. 22ಕ್ಕೆ ದೈಹಿಕ ಶಿಕ್ಷಣ ಶಿಕ್ಷಕರು, ಗ್ರೇಡ್-1 ವಿಶೇಷ ಶಿಕ್ಷಕರು

ಪರಸ್ಪರ ವರ್ಗಾವಣೆ: ಸಹಶಿಕ್ಷಕರು ದೈಹಿಕ ಶಿಕ್ಷಕರು ವಿಶೇಷ ಶಿಕ್ಷಕರು,ವರ್ಗಾವಣೆ ಕೌನ್ಸಲಿಂಗ್ ಹಾಜರಾಗುವ ಶಿಕ್ಷಕ ವೃಂದದವರು ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಿದೆ.


Google News

 

 

WhatsApp Group Join Now
Telegram Group Join Now
Suddi Sante Desk