ಹುಬ್ಬಳ್ಳಿ –
ಸದಾ ಒಂದಿಲ್ಲೊಂದು ಎಡವಟ್ಟುಗಳಿಂದ ಸುದ್ದಿ ಯಾಗುತ್ತಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ದೊಡ್ಡ ಎಡವಟ್ಟೊಂದು ಬೆಳಕಿಗೆ ಬಂದಿದೆ.ಹೌದು ಆಸ್ಪತ್ರೆಯ ಹಳೇಯ ತುರ್ತು ವಿಭಾ ಗದಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ಬಂದ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿದ ಇಲ್ಲಿನ ಸಿಬ್ಬಂದಿಗಳು ಇಬ್ಬರು ರೋಗಿಗಳಿಗೆ ಆಕ್ಸಿಜನ್ ನೀಡಿ ಒಂದೇ ಬೆಡ್ ಮೇಲೆ ಅಕ್ಕ ಪಕ್ಕ ದಲ್ಲಿಯೇ ಮಲಗಿಸಿದ್ದಾರೆ.ಅನಾರೋಗ್ಯದಿಂದ ಬಳ ಲುತ್ತಿದ್ದ ಇಬ್ಬರು ವಯೋವೃದ್ದರಿಗೆ ಆಕ್ಸಿಜನ್ ಹಾಕಿದ ಸಿಬ್ಬಂದಿಗಳು ಮಾನವಿಯತೆ ಇಲ್ಲದಂತೆ ಹೀಗೆ ಅಕ್ಕ ದಲ್ಲಿ ಮಲಗಿಸಿದ್ದಾರೆ.
ಮೊದಲೇ ಚಿಕ್ಕದಾದ ಈ ಒಂದು ಬೆಡ್ ನಲ್ಲಿ ಇಬ್ಬರು ಆಕ್ಸಿಜನ್ ಹಾಕಿಕೊಂಡು ಮಲಗಿರುವ ಚಿತ್ರಣವನ್ನು ನೋಡಿದರೆ ನಿಜವಾಗಿಯೂ ದೊಡ್ಡದಾದ ಈ ಒಂದು ಆಸ್ಪತ್ರೆಯಲ್ಲಿ ಇಂಥಹ ವ್ಯವಸ್ಥೆ ಇದೇನಾ ಎಂಬ ಮಾತುಗಳು ಅನುಮಾನ ಕಂಡುಬರುತ್ತಿದೆ. ಮೇಲಿಂದ ಮೇಲೆ ಕೇಂದ್ರ ಸಚಿವರು ರಾಜ್ಯ ಸರ್ಕಾರ ಸೇರಿದಂತೆ ಎಲ್ಲರೂ ಅಪಾರ ಪ್ರಮಾಣದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿದರು ಕೂಡಾ ಯಾಕೇ ಇಲ್ಲಿನ ಸಿಬ್ಬಂದಿಗಳು ಹೀಗೆ ಮಾಡತಾರೆ ಎಂಬ ಮಾತುಗಳು ಸಧ್ಯ ಈ ಒಂದು ವಿಡಿಯೋವನ್ನು ನೋಡಿದರೆ ಕೇಳಿ ಬರುತ್ತವೆ.
ಏನೇ ಆಗಲಿ ಇಲ್ಲಿನ ಸಿಬ್ಬಂದಿಗಳು ಇಲ್ಲಿಗೆ ಬರುವ ಸಾರ್ವಜನಿಕರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬೊದಕ್ಕೆ ಇದುವೇ ಸಾಕ್ಷಿಯಾಗಿದ್ದು ಇನ್ನಾದರೂ ಇಂಥಹ ಘಟನೆಗಳು ಸಧ್ಯ ಎದುರಾಗಿರುವ ಮಹಾ ಮಾರಿಯ ಪರಸ್ಥಿತಿಯ ನಡುವೆ ಆಗದಂತೆ ನೋಡಿ ಕೊಳ್ಳಬೇಕಿದೆ