ಬೆಳಗಾವಿ –
ಕನ್ನಡ ಮಾತನಾಡಿದ ಇಬ್ಬರು ಯುವಕರಿಗೆ ಹಿಗ್ಗಾ ಮುಗ್ಗಾ ಥಳಿತ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿಯ ರಾಜಹಂಸಘಢ ಕೋಟೆಯಲ್ಲಿ ಈ ಒಂದು ಘಟನೆ ನಡೆದಿದೆ.
ಯುವಕರ ಮೇಲೆ ಸ್ಥಳೀಯರಿಂದ ಹಲ್ಲೆಯಾಗಿದೆ. ಬೆಳಗಾವಿ ತಾಲೂಕಿನ ರಾಜಹಂಸಗಢದಲ್ಲಿರುವ ಕೋಟೆಯಲ್ಲಿ ಈ ಒಂದು ಹಲ್ಲೆಯಾಗಿದ್ದು ಕನ್ನಡ ಮಾತನಾಡಿದ್ದಕ್ಕೆ ಆಕ್ರೋಶಗೊಂಡು ಇಬ್ಬರು ಯುವಕರ ಮೇಲೆ ಹಲ್ಲೆಯನ್ನು ಮಾಡಲಾಗಿದೆ.
ನಿನ್ನೆ ಮದ್ಯಾಹ್ನ ಈ ಒಂದು ಘಟನೆ ನಡೆದಿರೋ ಬೆಳಕಿಗೆ ಬಂದಿದೆ. ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಕೋಟೆಗೆ ಹೋಗಿದ್ದ ಯುವಕರ ಮೇಲೆ ಸ್ಥಳೀಯರು ಹೀಗೆ ಹಲ್ಲೆಯನ್ನು ಮಾಡಿದ್ದಾರೆ.
ಸಧ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ. ಇನ್ನೂ ಒಂದಲ್ಲ ಒಂದು ರೀತಿಯಲ್ಲಿ ಕನ್ನಡಿಗರ ಮೇಲೆ ಸಮಸ್ಯೆಯನ್ನು ಮಾಡುತ್ತಿರುವವರು ಬೆಳಗಾವಿಯಲ್ಲಿ ಈಗ ಕನ್ನಡದಲ್ಲಿ ಮಾತನಾಡಿದವರ ಮೇಲೆ ಹೀಗೆ ದೌರ್ಜನ್ಯವನ್ನು ಮಾಡಿದ್ದು ನಿಜಕ್ಕೂ ವಿಷಾದದ ಸಂಗತಿಯಾಗಿದೆ.