ಧಾರವಾಡ –
ಧಾರವಾಡದ ಹೆಬಸೂರು ಗ್ರಾಮದಲ್ಲಿ ವಿದ್ಯಾಗಮವನ್ನು ಆರಂಭ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಈ ಒಂದು ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾಗಮ ಪ್ರಾರಂಭೋತ್ಸವನ್ನು ವಿಶೇಷವಾಗಿ ಮತ್ತು ವಿಜ್ರಂಭಣೆಯಿಂದ ಆರಂಭ ಮಾಡಲಾಯಿತು.

ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಅನುಸಾರ ಹೂ ಗುಚ್ಛ ನೀಡಿ ಚಾಕಲೇಟ ಕೊಟ್ಟು ಪುಷ್ಪಾರ್ಚನೆಗೈದು ಸ್ಯಾನಿಟೈಸ್ ನೊಂದಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ನಡೆಸಲಾಯಿತು.

ಎಸ್.ಡಿ.ಎಮ್.ಸಿ.ಪದಾಧಿಕಾರಿಗಳಾದ ಲಾಡಸಾಬ ಶೇಖಸನದಿ ಬಿ.ಎಫ್.ಭೂಮಣ್ಣವರ ಕಾವೇರಿ ಅಕ್ಕಿ ಆರ್.ವಾಯ್.ಬಾರ್ಕೇರ.ಮು.ಶಿ.ಎಸ್.ಎಲ್.ಬೆಟಗೇರಿ.ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಸಜ್ಜನ.

ಸಿ.ಆರ್.ಪಿ ದುರಗೇಶ ಮಾದರ.ದೇವೇಂದ್ರ ಪತ್ತಾರ.ಲತಾ ಗ್ರಾಮಪುರೋಹಿತ ಎಮ್.ಎನ್.ಮಾಡಳ್ಳಿ ಎಸ್.ಜಿ.ಕಂಬಳಿ ಎಸ್.ಎಸ್.ಮಡಿವಾಳರ ಡಿ.ಎಸ್.ಕೊರಗರ.ಸುಧಾ.ಕೊಣ್ಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು