ಹುಬ್ಬಳ್ಳಿ –
ಯುವತಿ ಮೇಲೆ ಪಾಗಲ್ ಪ್ರೇಮಿ ಹಲ್ಲೆ ಪ್ರಕರಣ ವಿಚಾರ ಕುರಿತು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬುರಾಮ್ ಸಿಂಗ್ ಮಾತನಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಯುವಕ, ಯುವತಿ ನಡುವೆ ಹಿಂದಿನಿಂದ ಪರಿಚಯ ಇತ್ತು.
ಯುವತಿ ಮನೆಯ ಹತ್ತಿರವೇ ಬೆಳಿಗ್ಗೆ 10 ಗಂಟೆಗೆ ಹಲ್ಲೆ ಆಗಿದೆ.ಆರೊಪಿ ಇಸ್ಮಾಯಿಲ್ ಯುವತಿಯ ಮನೆ ಹತ್ತಿರ ಕಾಯ್ದು ಹಲ್ಲೆ ಮಾಡಿದ್ದಾನೆ. ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ .

ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಯುವತಿ ಆರೋಗ್ಯವಾಗಿದ್ದಾಳೆ.ಪ್ರಕರಣ ದಾಖಲಸಿಕೊಂಡು ವಿಚಾರಣೆ ನಡೆಸಿದ್ದೇವೆ ಎಂದರು. ಸಧ್ಯ ಯುವತಿ ಕೂಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಆಯುಕ್ತರು ಆಸ್ಪತ್ರೆಗೆ ಭೇಟಿ ನೀಡಿದರು.

ಇನ್ನೂ ಪೊಲೀಸ್ ಆಯುಕ್ತರು ಖಾಸಗಿ ಅಸ್ಪತ್ರೆಗೆ ಭೇಟಿ ನೀಡಿದರು.ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೊ ಯುವತಿ.ತಲ್ವಾರ್ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರೋ ಯುವತಿಯ ಆರೋಗ್ಯ ವಿಚಾರಣೆ ಮಾಡಿದರು.ಪಾಗಲ್ ಪ್ರೇಮಿ ಇಸ್ಮಾಯಿಲ್ ನಿಂದ ತಲ್ವಾರ್ ದಾಳಿಗೊಳಗಾಗಿದ್ದ ಯುವತಿ.ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವತಿ.