This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ಕಾರಣ ಯಾರು – ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ಕಷ್ಟ ನೋವು ಇವರಿಗ್ಯಾಕೆ ಅಷ್ಟೇ….. ಉತ್ತರಿ ಸುವವರು ಯಾರು…..

WhatsApp Group Join Now
Telegram Group Join Now

ಬೆಂಗಳೂರು –

ಶಿಕ್ಷಕರ ವರ್ಗಾವಣೆ ಕನಿಷ್ಠ 3 ತಿಂಗಳು ಮುಂದಕ್ಕೆ ಹೋಗಲಿದೆ ಅಥವಾ ಶೇ 25 ಹುದ್ದೆಗಳು ಖಾಲಿ ಇರುವ ತಾಲೂಕಿನ ಶಿಕ್ಷಕರಿಗೆ ತಾಲೂಕಿನ ಒಳಗೆ ಮತ್ತು ಹೊರಗೆ ಕೋರಿಕೆ ವರ್ಗಾವಣೆ ಇಲ್ಲವೇ ಹೀಗೆ ಹತ್ತು ಹಲವಾರು ಪ್ರಶ್ನೆ ಗಳು ಕಾಡುತ್ತಿವೆ

1) ದಿನಾಂಕ.. 09.06.2020 ರ ಕರ್ನಾಟಕ ರಾಜ್ಶ ಸಿವ್ಹಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2020 ದಿನಾಂಕ. 22.07.2020 ರ ನಿಯಮ 5 ರ ಪ್ರಕಾರ ವರ್ಗಾವಣೆ ಪರಿಮಿತಿ ಹಾಗೂ ನಿಯಮ 18 (2), 21(2) ಹಾಗೂ 22(1) ರ ಪ್ರಕಾರ ಶೇ ಇಪ್ಪತ್ತೈದಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲೂಕಿನಿಂದ ಸ್ವಿಕರಿಸಿದ ಅರ್ಜಿಯನ್ನು ವರ್ಗಾವಣೆಗಾಗಿ ಪರಿಗಣಿಸತಕ್ಕದ್ದಲ್ಲ ಎಂಬ ನಿಯಮ ರೂಪಿಸಿ ಈ ನಿಯಮ ಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
2) 22.07.2020 ರಂದು ಸಲ್ಲಿಕೆಯಾದ ಆಕ್ಷೇಪಣೆ ಸರಿಪಡಿಸಿ ಸರ್ಕಾರ ಕರ್ನಾಟಕ ರಾಜ್ಶ ಸಿವ್ಹಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2020 ದಿನಾಂಕ. 22.07.2020 ರಂದು ಅಧಿನಿಯಮವನ್ನು ಜಾರಿಗೆ ತರಿಲಾಯಿತು. ನಿಯಮ 5 ರ ಪ್ರಕಾರ ವರ್ಗಾವಣೆ ಪರಿಮಿತಿಗಳನ್ನು ಹಾಗೂ ನಿಯಮ 18 (2), 21(2) ಹಾಗೂ 22(1) ರ ಪ್ರಕಾರ ಶೇ ಇಪ್ಪತ್ತೈದಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲೂಕಿನಿಂದ ಸ್ವಿಕರಿಸಿದ ಅರ್ಜಿಯನ್ನು ವರ್ಗಾವಣೆಗಾಗಿ ಪರಿಗಣಿಸತ ಕ್ಕದ್ದಲ್ಲ ಎಂಬ ನಿಯಮ ರೂಪಿಸಿರುತ್ತದೆ.
3) ದಿನಾಂಕ 15.10.2020 ವರ್ಗಾವಣೆಗೆ ಖಾಲಿ ಹುದ್ದೆಯ ಪ್ರಮಾಣ ಲೆಕ್ಕಾಚಾರ ಹೇಗೆ ಮಾಡಬೇಕೆಂಬ ಕುರಿತು ಮಾನ್ಶ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಅವರಿಂದ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳಿಗೆ ಸ್ಪಷ್ಟೀಕರಣಕ್ಕಾಗಿ ಪತ್ರ ಬರೆಯಲಾಗಿತ್ತು.

4) ದಿನಾಂಕ.. 12.11.2021 ರಂದು ಸರ್ಕಾರದ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೆಂಗಳೂರು ಅವರು ಸ್ಪಷ್ಟೀಕರಣ ಅಂಶ (3) ರಂತೆ ಇದೊಂದು ಅಸಾಧಾರಣ ಪರಸ್ಥಿತಿ ವರ್ಷವಾಗಿರುವುದರಿಂದ ಪದೋನ್ನತಿ ಗಳ ಮೂಲಕ ಶೇಕಡ 25 ಖಾಲಿ ಹುದ್ದೆಯ ತಾಲೂಕುಗಳು ಹೆಚ್ಚಾಗಿರುವು ದರಿಂದ ಅಧಿಸೂಚನೆಯ ದಿನಾಂಕಕ್ಕೆ ಯಾವುದೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆಯ ಆಧಾರದಲ್ಲಿ ಶೇ 25 ಲೆಕ್ಕಾಚಾರ ಮಾಡುವುದು. ಈ ಬಾರಿ ಮಂಜೂರಾದ ಹುದ್ದೆಗಳ (Sanction post) ಆಧಾರದ ಮೇಲೆ ಶೇ 25 ಲೆಕ್ಕಾಚಾರ ಬೇಡ ಎಂದು ಸ್ಪಷ್ಟೀ ಕರಣ ನೀಡಿದ್ದರು.

5) ಇಂದು ದಿನಾಂಕ. 23.11.2021 ರಂದು ಸರ್ಕಾರದ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೆಂಗಳೂರು ರವರು ಮತ್ತೊಂದು ಸ್ಪಷ್ಠಿಕರಣ ನೀಡಿ ಅಧಿಸೂಚನೆಯ ದಿನಾಂಕಕ್ಕೆ ಯಾವುದೇ ಘಟಕ ದಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆಯ ಆಧಾರದ ಮೇಲೆ ಶೇಕಡಾವಾರು ಮಿತಿಯನ್ನು ಲೆಕ್ಕಾಚಾರ ಮಾಡು ವುದು ಎಂದು ಸೂಚಿಸಿರುತ್ತಾರೆ.ಇಲ್ಲಿ ವರ್ಗಾವಣೆ ಪರಿ ಮಿತಿ ನಿರ್ದರಿಸಲು ಅಧಿನಿಯಮ (ಕ್ರ ಸಂ 1&2ರಂತೆ) & ಸ್ಪಷ್ಠಿಕರಣ ಕ್ರ ಸಂ 5)ದಂತೆ ಮಂಜೂರಾದ ಒಟ್ಟು ಹುದ್ದೆ ಕಾರ್ಯನಿರ್ವಹಿಸುವ ಹುದ್ದೆ + ಖಾಲಿ ಹುದ್ದೆ) ಸಂಖ್ಯೆ ಯನ್ನು ವರ್ಗಾವಣೆ ಪ್ರಮಾಣಕ್ಕೆ ಪರಿಗಣಿಸುವುದು ಅನಿವಾರ್ಯವಾಗಲಿದೆ.ಕಲ್ಶಾಣ ಕರ್ನಾಟಕ & ಕಿತ್ತೂರು ಕರ್ನಾಟಕ ಭಾಗದಲ್ಲಿನ ಬಹುತೇಕ ತಾಲೂಕುಗಳಲ್ಲಿ ಶೇ 25 ಕ್ಕೂ ಹೆಚ್ಟು ಹುದ್ದೆ ಖಾಲಿ ಇರುವದು ನಮಗೆಲ್ಲ ತಿಳಿದ ವಿಷಯ. ಶೇ 25 ಹುದ್ದೆಗಳು ಖಾಲಿ ಇರುವ ತಾಲೂಕುಗಳಲ್ಲಿ

ಹಾಲಿ ನಿಯಿಮಗಳ ಪ್ರಕಾರ ವರ್ಗಾವಣೆ ಗಗನ ಕುಸುಮ ವಾಗಲಿದೆ.ವರ್ಗಾವಣೆಗೆ ಶೇ ಇಪ್ಪತ್ತೈದಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲೂಕಿನಿಂದ ಸ್ವಿಕರಿಸಿದ ಅರ್ಜಿಯನ್ನು ವರ್ಗಾವಣೆಗಾಗಿ ಪರಿಗಣಿಸತಕ್ಕದ್ದಲ್ಲ ಎಂಬ ನಿಯಮದ ಪ್ರಕಾರ ತಾಲೂಕಿನ ಒಳಗೂ ಕೂಡಾ ವರ್ಗಾ ವಣೆ ಹೊಂದುವಂತಿಲ್ಲ.ಮಂಜೂರಾದ ಹುದ್ದೆಗಳ ಆಧಾರ ದಲ್ಲಿ ವರ್ಗಾವಣೆ ಪರಿಮಾಣ ಹೆಚ್ಚಾಗಿ ಇದರಿಂದ 7%, 2%,2%, ಲೆಕ್ಕದಲ್ಲಿ ಹೆಚ್ಚಿನ ಜನರಿಗೆ ಅವಕಾಶ ಸಿಗುತ್ತದೆ.
ಆದರೆ ಮಂಜೂರಾದ ಹುದ್ದೆ ಪರಿಗಣಿಸಿ ಶೇ 25 ಖಾಲಿ ಹುದ್ದೆ ನಿಭಂದನೆ ಮಾಡಿದಲ್ಲಿ ಕೌನ್ಸಲಿಂಗನಲ್ಲಿ ರಾಜ್ಶದ ಬಾಗಶ: ತಾಲೂಕುಗಳು ಶಿಕ್ಷಕರ ವರ್ಗಾವಣೆಗೆ ಘಟಕದ ಒಳಗೆ & ಹೊರಗೆ ತೆರೆದುಕೊಳ್ಳುವದಿಲ್ಲ.ಈ ಎಲ್ಲ ನಿಯಮ ಗಳ ತಿದ್ದುಪಡಿ ಮಾಡಿ ಅಥವಾ ಸಡಲಿಸಿ ಹೊಸ ನಿಯಮ ಗಳನ್ನು ರೂಪಿಸಿಲು ವಿಧಾನ ಸಭೆ & ವಿಧಾನ ಪರಿಷತ್ ಅಧಿವೇಶನಕ್ಕಾಗಿ ಕಾಯಬೇಕು. ಅದಕ್ಕೆ ಕನಿಷ್ಠ 6 ತಿಂಗಳು ಬೇಕು.ಬೇಗನೆ ತಿದ್ದುಪಡಿ ಆಗಬೇಕಾದರೆ ಅದ್ಶಾದೇಶ, (Ordinance) ಸುಗ್ರೀವಾಜ್ಞೆ ತರಬೇಕು. ಅದನ್ನು ತರಲು ಕನಿಷ್ಠ 3 ತಿಂಗಳು ಸಮಯವಾದರು ಬೇಕಾಗಲಿದೆ.
ಶಾಲೆಗಳಿಗೆ ಶಿಕ್ಷಕರ ಅವಶ್ಶಕತೆ (ಬೇಡಿಕೆ), ಶಿಕ್ಷಕರ ವರ್ಗಾವಣೆಯಿಂದ ಪರಿಹಾರವಾಗುವದಿಲ್ಲ. ಸರ್ಕಾರ ಅವಶ್ಶಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಾರದೇಕೆ?
ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ಕಾರಣ ಯಾರು ?? ಯಕ್ಷ ಪ್ರಶ್ನೆ? ಶಿಕ್ಷಕರು ಹಲವಾರು ಕೌಟಂಬಿಕ ಹಾಗೂ ಆರ್ಥಿಕ ಸಮಸ್ಸೆಗಳನ್ನು ಎದುರಿಸುತಿದ್ದು ಸಂಬಂಧಿಸಿದವರು ದಯವಿಟ್ಟು ಬೇಗನೆ ವರ್ಗಾವಣೆ ಪ್ರಾರಂಭಿಸಬೇಕಾಗಿ ವಿನಂತಿ.

?ವಂದನೆಗಳೊಂದಿಗೆ?

ತಮ್ಮ ವಿಶ್ವಾಸಕರು
ಅರ್ಜುನ ಗಂ ಲಮಾಣಿ
ಶಿಕ್ಷಕರು/ನಿರ್ದೇಶಕರು ಸರಕಾರಿ ನೌಕರರ ಸಹಕಾರಿ ಬ್ಶಾಂಕ ವಿಜಯಪೂರ
@ 9448179386

ಹಣಮಂತ ಬ ಕೊಣದಿ
ಶಿಕ್ಷಕರು
ನಿರ್ದೇಶಕರು ಸರಕಾರಿ ನೌಕರರ ಸಹಕಾರಿ ಬ್ಶಾಂಕ ವಿಜಯಪೂರ @9900582596


Google News

 

 

WhatsApp Group Join Now
Telegram Group Join Now
Suddi Sante Desk