ಮಶಿನ್ ಬಡಿದು ಮಹಿಳೆ ಸಾವು – ಚಾಲಕನ ನಿರ್ಲಕ್ಷ್ಯದಿಂದ ಜೀವ ಕಳೆದುಕೊಂಡ ಕೂಲಿ ಕಾರ್ಮಿಕ ಮಹಿಳೆ

Suddi Sante Desk

ಅಣ್ಣಿಗೇರಿ –

ಹತ್ತಿ ತುಂಬುವ ಯಂತ್ರವೊಂದು ಬಡಿದು ಮಹಿಳೆಯೊಬ್ಬಳು ಸಾವಿಗೀಡಾದ ಘಟನೆ ಧಾರವಾಡದ ಅಣ್ಣಿಗೇರಿಯಲ್ಲಿ ನಡೆದಿದೆ.

ಅಣ್ಣಿಗೇರಿ ಪಟ್ಟಣದ ಸಹಕಾರಿ ಸಂಘದ ಗುಡಾನ್ ನಲ್ಲಿ ಈ ಒಂದು ಘಟನೆ ನಡೆದಿದೆ. ಸುಜಾತ ಹನಮಂತಪ್ಪ ಮೃತ ಮಹಿಳೆಯಾಗಿದ್ದಾಳೆ. ಎಂದಿನಂತೆ ಕೆಲಸಕ್ಕೆ ಬಂದ ಮಹಿಳೆ ಗುಡಾನ್ ನಲ್ಲಿ ಹತ್ತಿ ತುಂಬುತ್ತಿದ್ದರು ಒಂದು ಕಡೆ ನಿಂತುಕೊಂಡಿದ್ದರು ಈ ಒಂದು ಸಮಯದಲ್ಲಿ ಟ್ರಾಕ್ಟರ್ ನ್ನು ಚಾಲಕ ಹಿಂದೆ ತಗೆದುಕೊಂಡಿದ್ದಾರೆ.

ಹಿಂದೆ ತಗೆದುಕೊಂಡ ಸಮಯದಲ್ಲಿ ಮಹಿಳೆಯ ತಲೆಗೆ ಜೋರಾಗಿ ಬಡಿದಿದ್ದು ತಲೆ ಹೊಡೆದು ಸ್ಥಳದಲ್ಲೇ ಮಹಿಳೆ ಸಾವಿಗೀಡಾಗಿದ್ದಾರೆ‌. ಇನ್ನೂ ಚಾಲಕನ ನಿರ್ಲಕ್ಷ್ಯ ದಿಂದಾಗಿ ಈ ಒಂದು ಘಟನೆ ನಡೆದಿದ್ದು ವಿಷಯ ತಿಳಿದ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.