ಗಾಂಧಿನಗರದಿಂದ ಬಂಡಮ್ಮೆ ದೇವಸ್ಥಾನದವರೆಗೆ ರಸ್ತೆಯನ್ನು ಅಗೆದು ಹಾಗೇ ಬಿಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹೀಗೆ ರಸ್ತೆಯನ್ನು ಬಿಟ್ಟಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಆರೋಪಿಸಿ ಗಾಂಧಿನಗರದ ನಿವಾಸಿಗಳು ಪ್ರತಿಭಟನೆ ಮಾಡಿದರು.
ರಸ್ತೆ ಮಾಡುವ ನೆಪದಲ್ಲಿ ವಿನಾಕಾರಣ ವಿಳಂಬ ಮಾಡುತ್ತಿರುವ ಧೋರಣೆಗೆ ಗಾಂಧಿನಗರದ ನಿವಾಸಿಗಳು ಅಸಮಾಧಾನಗೊಂಡಿದ್ದಾರೆ. ಮಂಜುನಾಥ ಬೋವಿ ,ಅರವಿಂದ ಹುಣಸಿಮರದ , ಮನೋಜ ಕರ್ಜಗಿ ನೇತ್ರತ್ವದಲ್ಲಿನ ಇಲ್ಲಿನ ನಿವಾಸಿಗಳು ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು.
ಕೆಲಕಾಲ ಮುಖ್ಯ ರಸ್ತೆಯನ್ನು ಬಂದ್ ಮಾಡಿದ ನಿವಾಸಿಗಳು ಕಾಮಗಾರಿ ನೆಪದಲ್ಲಿ ರಸ್ತೆಯನ್ನು ಅಗೆದು ತಗೆದು ಹಾಗೇ ಬಿಟ್ಟಿರುವ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಇನ್ನೂ ವಿಷಯ ತಿಳಿದ ಪಾಲಿಕೆಯ ಅಧಿಕಾರಿಗಳು ಶೀಘ್ರದಲ್ಲಿಯೇ ರಸ್ತೆ ಕಾಮಗಾರಿಯನ್ನು ಮುಗಿಸಲು ಭರವಸೆ ನೀಡಿದ್ರು.
ಇದರಿಂದ ನಿವಾಸಿಗಳು ತಮ್ಮ ಪ್ರತಿಭಟನೆಯನ್ನು ಹಿಂದೆ ತಗೆದುಕೊಂಡ್ರು. ಇನ್ನೂ ಇತ್ತ ಗಾಂಧಿನಗರದಿಂದ ಬಂಡೆಮ್ಮ ದೇವಸ್ಥಾನದವರೆಗೆ ಈ ಒಂದು ರಸ್ತೆಯನ್ನು ಮಾಡ್ತಾ ಇದ್ದಾರೆ ಸಂತೋಷದ ವಿಚಾರ .ಕಾಮಗಾರಿ ನೆಪದಲ್ಲಿ ವಿಳಂಬ ಮಾಡುತ್ತಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದರು.
ಇದೊಂದು ಮುಖ್ಯ ರಸ್ತೆಯಾಗಿದ್ದು ಕೂಡಲೇ ರಸ್ತೆಯ ಕಾಮಗಾರಿಯನ್ನು ಕೂಡಲೇ ಗುತ್ತಿಗೆದಾರರು ಮುಗಿಸುವಂತೆ ನಿವಾಸಿಗಳು ಒತ್ತಾಯವನ್ನು ಮಾಡಿದರು.
ಮಂಜುನಾಥ ಬೊವಿ, ಮಂಜುನಾಥ ಬೋವಿ ,ಅರವಿಂದ ಹುಣಸಿಮರದ , ಮನೋಜ ಕರ್ಜಗಿ, ಸಂತೋಷ ಪಟ್ಟಣಶೆಟ್ಟಿ,ನಾಗರಾಜ ಮಲ್ಲಾಡದ,ಆನಂದ ಜಾಧವ ,ರಾಜು ಸೂರ್ಯವಂಶಿ, ಲತಾ ಕುಸುಗಲ್ಲ್ ,ರೇಖಾ ನಾಡಗೌಡ್ರು ಸೇರಿದಂತೆ ಗಾಂಧಿನಗರದ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.