ಧಾರವಾಡ –
ಕೋವಿಡ್-19 ರ 2ನೇ ಅಲೆಯ ತೀವೃತೆಯನ್ನು ತಡೆಯಲು ಮತ್ತು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲೆಯ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯವಿದ್ದು, ಪ್ರತಿಯೊಬ್ಬ ನಾಗರಿಕನು ಕೊರೊನಾ ಸೈನಿಕರಂತೆ ಎಚ್ಚರ ವಹಿಸಿ ಸರ್ಕಾರಿ ಮಾರ್ಗಸೂಚಿಗಳನ್ನು ಸ್ವತ: ಪಾಲನೆ ಹಾಗೂ ಇತರರು ಪಾಲಿಸುವ ಕುರಿತು ನಿಗಾ ವಹಿಸ ಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿ ದ್ದಾರೆ. ಇಂದು ಬೆಳಿಗ್ಗೆ ಕಚೇರಿಯಲ್ಲಿ ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿದ ಅವರು, ಒಳಾಂಗಣ ಮತ್ತು ಹೊರಾಂಗಣದ ಎಲ್ಲ ರೀತಿಯ ಕಾರ್ಯಕ್ರಮ ಹಾಗೂ ಚಟುವಟಿಕೆಗಳ ನಿಯಂತ್ರಣಕ್ಕೆ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ಬಗ್ಗೆ ಪೊಲೀಸ್ ಇಲಾಖೆಯ ಉಚಿತ ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಹಾಗೂ ಮಹಾನಗರ ಪಾಲಿಕೆಯ ಸಹಾಯವಾಣಿ 0836 2213888, 2213869 ಗೆ ಕರೆ ಮಾಡಿ ಅಥವಾ ಕಂಟ್ರೋಲ್‍ರೂಂ, ಮೊಬೈಲ್ ಸಂಖ್ಯೆ : 8277803778 ಗೆ ವಿಡಿಯೋ ಸಂದೇಶವನ್ನು ರವಾನಿಸಬಹುದು. ಮತ್ತು ಅಬಕಾರಿ ಇಲಾಖೆ ಯ ಸಹಾಯವಾಣಿ ಸಂಖ್ಯೆ 18004250742 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಪೊಲೀಸ್, ಮಹಾನಗರ ಪಾಲಿಕೆ ಮತ್ತು ಅಬಕಾರಿ ಇಲಾಖೆಯ ಸಹಾಯವಾಣಿ ಗಳು ದಿನದ 24 ಗಂಟೆಯೂ ಲಭ್ಯವಿರುತ್ತವೆ. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಕಂಡು ಬಂದಲ್ಲಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು